
ಸೋಮವಾರಪೇಟೆ: ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಆರೋಪದ ಮೇರೆಗೆ ಯುವಕನೊಬ್ಬನಿಗೆ ₹ 18,500 ದಂಡ ವಿಧಿಸಿದ್ದಾರೆ.
ಕಾಲೇಜೊಂದರ ಬಳಿ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಾ, ಅಜಾಗರೂಕತೆಯ ಚಾಲನೆಯೊಂದಿಗೆ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೈಕ್ ಓಡಿಸುತ್ತಿದ್ದ ಯುವಕನನ್ನು ಬೆನ್ನಟ್ಟಿದ ಪೊಲೀಸರು, ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಬೈಕ್‌ನಲ್ಲಿ ಅಗತ್ಯ ದಾಖಲೆಗಳು ಇಲ್ಲದಿರುವುದು ಕಂಡುಬಂದಿದೆ.
ಒಟ್ಟಾರೆ ಎಲ್ಲ ನಿಯಮಗಳ ಉಲ್ಲಂಘನೆಗೆ ₹ 18,500 ದಂಡ ವಿಧಿಸಿದರು.
ಈ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಕಿರಿಕಿರಿ ತೋರುವ ಪುಂಡರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
