
ಹಾಸನ : ಮಾನವ ಹಕ್ಕುಗಳ ಒಕ್ಕೂಟ ಜಿಲ್ಲಾ ಘಟಕದವತಿಯಿಂದ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ದಿನಗಳ ನೆನಪು ಮಾಡಿಕೊಂಡಾಗ ನಿಜವಾಗಲು ನಮ್ಮ ಸಂಸ್ಕೃತಿಯಲ್ಲಿ ಹೆಣ್ಣುವನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಿದ್ದು, ಮಾತೃದೇವೊ ಭವ ಎಂದು ಕರೆಯುತ್ತೇವೆ. ಹೆಣ್ಣು ಎಂದರೇ ಮಾತೆಯಾಗಿ ನೋಡುವ, ಗೌರವಿಸುವಂತಹ ಸಂಸ್ಕೃತಿ ನಮ್ಮ ನಾಡಾಗಿದೆ. ಹೆಣ್ಣಿಗೆ ಪೂಜ್ಯನಿಯವಾದಂತಹ ಸ್ಥಾನ • ಕೊಟ್ಟಿದ್ದಾರೆ. ಎಲ್ಲಿ ಹೆಣ್ಣನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ನಮ್ಮ ಸಂಸ್ಕೃತಿ ನಡೆಸಿಕೊಂಡು ಬಂದಿದೆ ಎಂದರು.
ಇದೆ ಸಂದರ್ಭದಲ್ಲಿ ಮಾನವ ಹಕ್ಕುಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಯಲಗುಂದ ಶಾಂತಕುಮಾರ್,, ಪ್ರಧಾನ ಕಾರ್ಯದರ್ಶಿ ಜಿ. ಕುಮಾರ್, ಖಜಾಂಚಿ ಕೆ.ವಿ. ಕಲ್ಲೇಶಾಚಾರ್, ಕಾನೂನು ಸಲಗೆಗಾರರಾದ ದೇವರಾಗೌಡ, ಜನತಾ ಬಜಾರು ಸಗಟು ಸಹಕಾರ ಸಂಘದ ನಿರ್ದೇಶಕ ರಶ್ಮಿ ಕೃಷ್ಣಗೌಡ, ಹಾಸನ ಕೋ-ಆಪರೇಟಿವ್ ಸೊಸೈಟಿ ಮಹಿಳಾ ನಿರ್ದೇಶಕಿ ನೀತು ಕೊಥಾರಿ, ಹೆಚ್.ಸಿ.ಎನ್. ಮತ್ತು ಅಮೋಘವಾಣಿ ಪ್ರಕಾಶಕರಾದ ಇಂದಿರಾ ರಂಗಸ್ವಾಮಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚೈತ್ರಾ ಮಂಜೇಗೌಡ, ಭಾರತ್ ಸೈಟ್ ಅಂಡ್ ಗೈಡ್ ನಿವೃತ್ತ ಶಿಕ್ಷಕರಾದ ಕಾಂಚನಮಾಲ, ವಕೀಲರಾದ ಎಸ್.ಎಸ್. ಪಲ್ಲವಿ, ಎ.ಎಸ್.ಐ. ಕೀರ್ತಿಬಾಯಿ, ಜನನಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಭಾನುಮತಿ ಇತರರು ಉಪಸ್ಥಿತರಿದ್ರು.ರಾಧ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಸಾವಿತ್ರಿ ಗಂಗಾಧರ್ ಪ್ರಾರ್ಥಿಸಿದರು. ಶೋಭ ಹರೀಶ್ ಸ್ವಾಗತಿಸಿದರು. ಪಂಕಜ ಸತೀಶ್ ವಂಧಿಸಿದರು
