**ಆಲೂರು : ಕ್ರೀಡಾಕೂಟಕ್ಕೆ ಹಾಸನ ಜಿಲ್ಲಾ ಸಂಸದ ಶ್ರೇಯಸ್ ಎಂ ಪಟೇಲ್ ಚಾಲನೆ ನೀಡಿ ಮಾತಾನಾಡಿದವರು ಶ್ರೇಯಸ್ ಕಪ್ ಇಡುವಸ್ಟು ನಾನು ದೊಡ್ಡವನಲ್ಲ ಆದರೂ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಅಭಾರಿಯಾಗಿದ್ದೇನೆ ನಮ್ಮ ಸಾಧನೆ ಜಿಲ್ಲೆಯ ಜನತೆಗೆ ಇನ್ನೂ ಕೂಡ ಶೂನ್ಯ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಬೆಂಬಲದಿಂದ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಅಲ್ಲದೆ ಕ್ರೀಡಾಂಗಣದಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ನಮ್ಮ ತಾಲ್ಲೂಕು ಗ್ಯಾರಂಟಿಯೋಜನೆಗಳ ಅಧ್ಯಕ್ಷರಾದ ಪೃಥ್ವಿ ಜಯರಾಮ್ ರವರು ನನ್ನ ಗಮನಕ್ಕೆ ತಂದಿದ್ದಾರೆ

ಕೊಡಲೇ ಅದನ್ನು ತುರ್ತಾಗಿ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು ಹಾಗೂ ಇಂದಿನ ಪರಿಸ್ಥಿತಿಯಲ್ಲಿ ಹಲವಾರು ಯುವಕರು ಮಾದಕ, ಮದ್ಯಪಾನ, ಧೂಮಪಾನ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಗುರಿಯನ್ನು ಯುವಕರು ಹೊಂದಿರಬೇಕು.

ವಿದ್ಯಾರ್ಥಿಗಳು ಓದದೇ ಅನುತ್ತೀರ್ಣಗೊಂಡು, ಅರ್ಧಕ್ಕೆಶಿಕ್ಷಣ ಬಿಡುತ್ತಿರುವುದು ಆತಂಕಕಾರಿ ಬೆಳವಣಿಗೆ, ಉಜ್ವಲ ಭವಿಷ್ಯಕ್ಕಾಗಿವಿದ್ಯಾಭ್ಯಾಸದ ಅವಧಿಯಲ್ಲಿ ಉತ್ತಮವಾಗಿ ಓದಬೇಕು. ನವಸಮಾಜನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಮಾತಾನಾಡಿ ಗ್ರಾಮೀಣ ಭಾಗದ ಯುವಕರಿಗೆ ಇಂತಹ ಕ್ರೀಡಾಕೂಟಗಳು ತುಂಬಾ ಉತ್ತೇಜನ ನೀಡುವುದಲ್ಲದೆ ಹಲವಾರು ಬೇರೆ ಬೇರೆಯ ಊರಿನ ಯುವಕರನ್ನು ಪ್ರೀತಿ ವಿಶ್ವಾಸದಿಂದ ಬೇರೆಯಲು ಸಹಕಾರ ಮಾಡುತ್ತದೆ ಶ್ರೇಯಸ್ ಎಂಬ ಹೆಸರಲ್ಲೇ ಶ್ರೇಯಸ್ ಇದ್ದು ಯುವಕ ಮಿತ್ರರು ಮುಂದಿಯು ಕೂಡ ಅವರಿಗೆ ಇದೇ ರೀತಿ ಬೆಂಬಲ ಸಹಕಾರ ನೀಡಿ ಇನ್ನೂ ಹೆಚ್ಚಿನ ಅಭಿವೃದ್ದಿ ಬೆಳವಣಿಗೆಗೆ ಕೆಲಸ ಮಾಡಲು ಸಹಕರಿಸಿಬೇಕು

ಯುವಕರು ಪಾಠದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಕಲೆ,ಕ್ರೀಡಾ ಪ್ರತಿಭೆ ಇರುತ್ತದೆ. ಅದನ್ನು ವೇದಿಕೆಗಳಲ್ಲಿ ಹಾಗೂ ಆಟೋಟಗಳಲ್ಲಿಪ್ರದರ್ಶನ ಮಾಡಬೇಕು. ತಾಲ್ಲೂಕು ಅತಿ ಹಿಂದುಳಿದ, ಗಡಿ ಪ್ರದೇಶವಾಗಿದೆ. ಇಲ್ಲಿನ ಕೆಲ ಕ್ರೀಡಾಪಟುಗಳು ರಾಜ್ಯ ಹಾಗೂರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

ಅನೇಕ ಮಹನೀಯರ, ಸಾಧಕರ ಆದರ್ಶಗಳನ್ನು ಯುವಕರ ಪಾಲಿಸಬೇಕು ಎಂದರು. ಕ್ರೀಡಾಂಗಣದ ಅಭಿವೃದ್ಧಿಗೆ ಸಂಸದರ ನಿಧಿಯಿಂದ ಅನುದಾನ ನೀಡಬೇಕಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪೃಥ್ವಿ ಜಯರಾಮ್ ಮನವಿ ಮಾಡಿ ತಾಲ್ಲೂಕು ಕ್ರೀಡಾಂಗಣದಲ್ಲಿ ಶೌಚಾಲಯ ಹಾಗೂ ಹೈ ಮಾಸ್ಕ್ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದ್ದು ಕ್ರೀಡಾ ಪಟುಗಳಿಗೆ ತುಂಬಾ ತೊಂದರೆಯಾಗಿದೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಕೇವಲ ಅಶ್ವಾಸನೆ ನೀಡುತ್ತಿದ್ದಾರೆ ಹೋರೆತು ಕೆಲಸ ಮಾಡುತ್ತಿಲ್ಲ ಹಾಗಾಗಿ ದಯಮಾಡಿ ನೀವಾದರೂ ಈ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುಬೇಕೆಂದು ತಿಳಿಸಿ ಸಂಸದರು ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ ಯುವ ಜನಪ್ರಿಯ ಸಂಸದರಾದ ಶ್ರೇಯಸ್ ಪಟೇಲ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪೃಥ್ವಿ ಜಯರಾಮ್ ಮಾತಿಗೆ ಸಮಸ್ಯೆ ಆಲಿಸಿ ಬಗೆಹರಿಸಿಕೊಡುವುದಾಗಿ ತಿಳಿಸಿದರು…

ಈ ಸಂದರ್ಭದಲ್ಲಿ ಕದಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಾಂತಪ್ಪ, ಕಾಂಗ್ರೆಸ್ ಮುಖಂಡರಾದ ಟೀಕ್ ರಾಜು, ಸಂದೇಶ್, ಪ್ರಭು, ಹರೀಶ್, ರಾಜಶೇಖರ್ ಖಾಲಿದ್ ಪಾಷಾ ಇತರರಿದ್ದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *