
ಸಕಲೇಶಪುರ ದಿಂದ ಕೊಡ್ಲಿಪೇಟೆ ಹೋಗುವ ಬಸ್ಸು KA18F0524 ರಾಷ್ಟ್ರೀಯ ಹೆದ್ದಾರಿ 75 ಬಾಗೆ ಸಮೀಪ ರಸ್ತೆ ಮದ್ಯೆ ಕೆಟ್ಟು ನಿಂತಿದ್ದರು ಇದರಿಂದ ರಸ್ತೆಯಲ್ಲಿ ಬರುವ ವಾಹನ ಗಳಿಗೆ ತೊಂದರೆಯಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಇತ್ತೀಚೆಗೆ ಸರ್ಕಾರಿ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸರಿಯಾದ ಬಸ್ಸುಗಳು ಸಕಲೇಶಪುರ ಡಿಪೋ ದಲ್ಲಿ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ನಾಗೇಂದ್ರ ಹೊಸಕೊಪ್ಪಲು ಮನವಿ ಮಾಡಿಕೊಳ್ಳುತ್ತಿದ್ದಾರೆ
