
ಅರಸೀಕೆರೆ : ತಾಲೂಕಿನ ಕಣ ಕಟ್ಟೆ ಹೋಬಳಿ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಎಂದು ಸುಮಾರು ಒಂದುವರೆ ಕೋಟಿರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ದೇವಾಲಯ ಕಟ್ಟಡ ಕಾಮಗಾರಿ ಹಾರನಹಳ್ಳಿಸುಕ್ಷೇತ್ರ ಕೂಡಿಮಠದ ಉತ್ತರಾಧಿಕಾರಿ ಚೇತ ನ್ ಮರಿದೇವರ ಪಾದಪೂಜೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಂಕು ಸ್ಥಾಪನೆಯನ್ನು ನೆರವೇರಿಸಲಾಯಿತು
ಮಾಡಾಳು ಗ್ರಾಮದ ವರವಲಯದ ಯರೇಹಳ್ಳಿ ರಸ್ತೆ ಬದಿ ಇರುವಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಆವರಣದಲ್ಲಿ ಸ್ವಾಮೀಜಿ ಹಾಗೂ ಗ್ರಾಮದ ಆರಾಧ್ಯ ದೈವಶ್ರೀ ಗುರುಚನ್ನಬಸವೇಶ್ವರ ಸ್ವಾಮಿ ಮತ್ತು ಗ್ರಾಮಸ್ಥರು ಹಾಗೂ ಲಕ್ಷಾಂತರ ಮಂದಿ ಭಕ್ತರ ಆಶಯದಂತೆ ಭೂಮಿ ಪೂಜೆನೆರವೇರಿತು
ಈ ಸಂದರ್ಭದಲ್ಲಿಗೌರಮ್ಮ ದೇವಿ ಸೇವಾ ಸಮಿತಿಅಧ್ಯಕ್ಷ ಎಂಎಸ್ ನಟರಾಜ್ ಮಾತನಾಡಿ ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಹೊಂದಿರುವ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ನೂತನ ದೇವಾಲಯದ ನಿರ್ಮಾಣ ಕಾಮಗಾರಿಯು ಕೋಡಿಮಠದ ಜಗದ್ಗುರು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ಮತ್ತು ಅವರ ಮಾರ್ಗದರ್ಶನದಲ್ಲಿ ನಡೆಯಲಿದೆಯಂತೆ ಎಂದರು
ಮುರುಡೇಶ್ವರ ಶಿಲ್ಪಿ ವಿನಾಯಕ ಅವರ ತಂಡದೊಂದಿಗೆ ನಡೆಯುವ ದೇವಾಲಯ ಕಾಮಗಾರಿಗು 2026 ಪಂಚಮಿ ಎಂದು ಜಗದ್ಗುರುಗಳು ಲೋಕಾರ್ಪಣೆಗೊಳಿಸುವರು ಎಂದು ಅವರು ಹೇಳಿದರು
ಕೋಡಿಮಠದ ಏಜೆಂಟ್ ಮಹದೇವಪ್ಪನವರು ಮಾತನಾಡಿದರು. ಸೇವಾ ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ ಮುಖಂಡರಾದ ಕೊಡ್ಲಿ ಬಸವರಾಜ್ ಎಂಸಿ ನಟರಾಜ್ ನಂದೀಶ್ ಚಂದ್ರಶೇಖರ್ ಎಂ ಎಸ್ ಮುರುಳೇಗೌಡ ಎಂಜಿ ಶಿವಣ್ಣ ಎಂಬಿ ಅಶೋಕ್ ಎಂ ಯೋಗೀಶ್ ಸಂತೋಷ್ ಎಂ ಟಿ ಲೋಕೇಶ್ ಮಲ್ಲಿಕಾರ್ಜುನ ಸೇವಾ ನಮಿತಿಯ ಎಲ್ಲಾ ಸದಸ್ಯರು ದಲಿತ ಮುಖಂಡರಾದ ಎಂಡಿ ಸೋಮಶೇಖರ್ ಮಾಡಾಳು ಚಂದ್ರಪ್ಪ ಕಟ್ನಿತಿಮ್ಮಯ್ಯ ದಾಸಪ್ಪ ಉಪಸ್ಥಿತರಿದ್ದರು
