
ಸಕಲೇಶಪುರ. ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಹೇರೂರು ಗ್ರಾಮದಲ್ಲಿ 200 ವರ್ಷದ ಪುರಾತನ ಕಾಲದ ಭಾವಿಯ ಮರು ನಿರ್ಮಾಣಕ್ಕಾಗಿ ಗ್ರಾಮಸ್ಥರಿಂದ ಗುದ್ದಲಿ ಪೂಜೆ ನೆರೆವೇರಿಸಲಾಯಿತು.
ಗ್ರಾಮದಲ್ಲಿ ಸುಮಾರು 100 ಮನೆಗಳಿದ್ದು ಈ ಪುರಾತನ ಬಾವಿಯಿಂದ ಕುಡಿಯಲು ನೀರು ಉಪಯೋಗಿಸಲಾಗುತ್ತಿತ್ತು . ಈ ಬಾವಿಯು ಅತ್ಯಂತ ಪುರಾತನ ಕಾಲದಾಗಿದ್ದು ಕಳೆದ ಹತ್ತು ವರ್ಷದಿಂದ ಬಾವಿಗೆ ಕಟ್ಟಿದ ಕಲ್ಲಿನ ಕಟ್ಟಡ ಕುಸಿದು ಭಾಗಶಃ ಹಾನಿ ಒಳಗಾಗಿತ್ತು. ಈ ಸಮಸ್ಯೆಯನ್ನು ತಿಳಿದ ಕಾಂಗ್ರೆಸ್ ಯುವ ಮುಖಂಡರಾದ ಹೇರೂರು ಗಣೇಶ್ ಬಾವಿಯ ಪುನರ್ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಈ ಪುರಾತನ ಬಾವಿಯನ್ನು ಪುನರ್ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡಿ. ಒತ್ತಡ ತರುವ ಮೂಲಕ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಈ ಬಾವಿಯ ಪುನರ್ ನಿರ್ಮಾಣಕ್ಕೆ ಹಣ ಒದಗಿಸುವಂತೆ ಮಾಡಿದರು. ಇಂದು ಈ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು .
ಯುವ ಕಾಂಗ್ರೆಸ್ ಮುಖಂಡರಾದ ಹೇರೂರು ಗಣೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಏನ್ ಎಂ ಮಧು ಅವರ ಸಮಾಜಮುಖಿ ಕೆಲಸಕ್ಕೆ ವ್ಯಾಪಕ ಪ್ರಸಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಇದ್ದರು.



