ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ 2024 25 ನೇ ಸಾಲಿನ ಕಂದಾಯ ವಸೂಲಾತಿಯಲ್ಲಿ ಸುಮಾರು ಎರಡುವರೆ ಲಕ್ಷದ ವೆಚ್ಚದಲ್ಲಿ ಶೇಕಡ 25ರ ಅನುದಾನದಲ್ಲಿ ಪರಿಶಿಷ್ಟ ವರ್ಗದವರಿಗೆ ಸುಮಾರು ಹನ್ನೊಂದು ಹೊಲಿಗೆ ಯಂತ್ರ ಮತ್ತು ಸಾಮಾನ್ಯ ವರ್ಗದವರಿಗೆ ಹನ್ನೆರಡು ಹೊಲಿಗೆ ಯಂತ್ರ ಮತ್ತು ಒಬ್ಬ ವಿದ್ಯಾರ್ಥಿಗೆ ಓದಿಗೆ ಅನುಕೂಲವಾಗುವಂತೆ ಟ್ಯಾಬ್ ಹಾಗೂ ವಿಶೇಷ ಚೇತನರ 5% ಅನುದಾನದಲ್ಲಿ ಎಂಟು ಜನ ವಿಶೇಷ ಚೇತನ ಫಲಾನುಭವಿಗಳಿಗೆ ವಿದ್ಯುತ್ ಫ್ಯಾನ್ ಪಂಚಾಯತಿ ಅಧ್ಯಕ್ಷರಾದ ರೇಖಾ ಬಿ ಜಿ ರವರ ಅಧ್ಯಕ್ಷತೆಯಲ್ಲಿ ವಿತರಣೆ ಮಾಡಲಾಯಿತು.

ಸದಸ್ಯರಾದ ಜೈ ಶಂಕರ್ ಅವರು ಮಾತನಾಡಿ ನಮ್ಮ ಪಂಚಾಯತಿಯಲ್ಲಿ ಕಂದಾಯ ವಸೂಲಿ ಮಾಡಿದ ಹಣದಲ್ಲಿ ಪ್ರತಿ ವರ್ಷವೂ ಗ್ರಾಮದ ಫಲಾನುಭವಿಗಳಿಗೆ ಉಪಯುಕ್ತ ವಾಗುವಂತ ಸಲಕರಣೆಗಳನ್ನು ವಿತರಿಸುವುದು ಪಂಚಾಯತಿಯಲ್ಲಿ ಪ್ರತಿ ವರ್ಷವೂ ನಡೆಯುತ್ತಲೇ ಬಂದಿದೆ ಎಂದು ತಿಳಿಸಿದರು.

ಅಧ್ಯಕ್ಷರಾದ ರೇಖಾ ಬಿ ಜಿ ರವರು ಮಾತನಾಡಿ ನಮ್ಮ ಪಂಚಾಯಿತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಪಂಚಾಯಿತಿಯನ್ನು ನಾವು ಹೀಗೆ ಮೇಲ್ದರ್ಜೆಗೆ ಏರಿಸುವುದೇ ನಮ್ಮಗಳ ಕರ್ತವ್ಯವಾಗಿದೆ ಈ ವರ್ಷ ಹೊಲಿಗೆ ಯಂತ್ರ ಮತ್ತು ವಿದ್ಯುತ್ ಫ್ಯಾನ್ ವಿತರಣೆ ನಡೆದಿದೆ

ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುವಂತೆ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಲ್ಯಾಪ್ಟಾಪ್ ಅಥವಾ ಟ್ಯಾಬ್ ಅನ್ನು ನೀಡುವುದಾಗಿ ಆಲೋಚನೆ ನಡೆಯುತ್ತಿದೆ ಎಂದು ತಿಳಿಸಿದರು.

ಈ ವೇಳೆ ಪಂಚಾಯಿತಿಯ ಅಭಿವೃದ್ಧಿಗಾಗಿ ಎಲೆಮರೆಕಾಯಿಯಾಗಿ ಹಗಲಿರುಳು ಶ್ರಮಿಸಿದಂಥ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಚಿನ್ನಸ್ವಾಮಿ ಅವರನ್ನು ಅಧ್ಯಕ್ಷರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಯಪ್ರಕಾಶ್ , ಉಪಾಧ್ಯಕ್ಷ ಸತೀಶ್, ರಾಕೇಶ್, ಶ್ರೀನಿವಾಸ್, ಚಾಲ್ಸ್ , ರಮೇಶ್, ಸವಿತಾ, ಪುಷ್ಪ , ವನಜಾಕ್ಷಿ, ಗಿರಿಜಾ, ಮೋಹಿನಿ, ಹಾಗೂ ಪಂಚಾಯತಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *