ಆಲ್ದೂರು – ಮಂಗಳೂರಿನ ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯನ್ನು ಖಂಡಿಸಿ ಇಂದು ಶೃಂಗೇರಿಯಲ್ಲಿ ಬಂದ್ ಹಾಗೂ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಈ ಪ್ರತಿಭಟನೆಯ ಕೇಂದ್ರ ಬಿಂದುವಾಗಿ ಹಿಂದೂ ಮುಖಂಡ ರಘು ಸಕಲೇಶಪುರ ಹಾಗೂ ನಾಲ್ವರು ಕಾರ್ಯಕರ್ತರು ತೆರಳುತ್ತಿದ್ದರು.

ಚಿಕ್ಕಮಗಳೂರಿನ ಆಲ್ದೂರು ಸಮೀಪದ ತಿರುವಿನಲ್ಲಿ ಅವರು ಸಂಚರಿಸುತ್ತಿದ್ದ Maruthi Ritz ಕಾರ್ ಬ್ರೇಕ್ ಫೈಲ್ ಆಗಿದ್ದು, ನಿಯಂತ್ರಣ ತಪ್ಪಿದೆ ವಾಹನ ಚಾಲಕ ಕಾರನ್ನು ನಿಯಂತ್ರಿಸಲು ಹೋಗಿ ಪಕ್ಕದ ಮಣ್ಣಿನ ಗುಡ್ಡೆಗೆ ಗುದ್ದಿದ್ದು ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಕಾರಿನಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳಿಯರು ತಕ್ಷಣ ಆಲ್ದೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮೊದಲ ಹಂತದ ಚಿಕಿತ್ಸೆ ಮಾಡಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *