
ಭಾರತದ ಆಪರೇಷನ್ ಸಿಂಧೂರಗೆ ಪಾಪಿ ಪಾಕಿಸ್ತಾನ ಪತರಗುಟ್ಟಿದೆ. ಪಾಕಿಸ್ತಾನದ ಬಂದರು ನಗರಿ ಎಂದೇ ಖ್ಯಾತಿ ಪಡೆದಿರುವ ಕರಾಚಿ ಹಾಗೂ ಇಸ್ಲಾಮಾಬಾದ್ ಮೇಲೂ ಭಾರತ ದಾಳಿ ಮಾಡಿದೆ. ಇದರಿಂದ ಪಾಕಿಸ್ತಾನ ಅಕ್ಷರಶಃ ನಲುಗಿ ಹೋಗಿದೆ.
ಭಾರತದ ವಾಯು ಸೇನೆ ಜೊತೆಗೆ ನೌಕಾಪಡೆಯು ಪಾಕಿಸ್ತಾನದ ವಿರುದ್ಧ ದಾಳಿಗೆ ಇಳಿದಿದೆ. ವಾಯು ಸೇನೆ ಹಾಗೂ ನೌಕಾಪಡೆಯು ಎರಡೂ ಜಂಟಿಯಾಗಿ ಅಟ್ಯಾಕ್ ಮಾಡುತ್ತಿವೆ. ವಿರೋಧಿ ರಾಷ್ಟ್ರದ ಪ್ರಮುಖ ನಗರಗಳಾದ ಇಸ್ಲಾಮಾಬಾದ್, ಬಂದರು ನಗರಿ ಕರಾಚಿ ಮೇಲೆ ಭಾರತ ಅಟ್ಯಾಕ್ ಮಾಡಿದೆ. ದಾಳಿ ಮುಂದಿರೆದಿದ್ದು ಪಾಕಿಸ್ತಾನದ ಮೇಲೆ ನಿರಂತರ ಕ್ಷಿಪಣಿ ದಾಳಿ ನಡೆಸಲಾಗುತ್ತಿದೆ.
ಪಾಕಿಸ್ತಾನದ ರಾವಲ್ಪಿಂಡಿ, ರಾವಲ್ಪಿಂಡಿತ ಕ್ರಿಕೆಟ್ ಸ್ಟೇಡಿಯಂ, ಲಾಹೋರ್ನಲ್ಲಿನ ಏರ್ ಡಿಫೆನ್ಸ್ ಸಿಸ್ಟಮ್ ಮೇಲೆ ಭಾರತೀಯ ವಾಯು ಸೇನೆ ದಾಳಿ ಮಾಡಿ ಸರ್ವನಾಶ ಮಾಡಿತ್ತು. ಕಛ್ನಲ್ಲಿದ್ದ ಪಾಕಿಸ್ತಾನದ 3 ಡ್ರೋಣ್ಗಳು ನಾಶ ಮಾಡಲಾಗಿದೆ. ಇದರ ಬೆನ್ನಲ್ಲೇ ಇಸ್ಲಾಮಾಬಾದ್, ಕರಾಚಿ ಸೇರಿದಂತೆ ಆ ದೇಶದ ಪ್ರಮುಖ ಏಳು ನಗರಗಳ ಮೇಲೆ ಭಾರತ ದಾಳಿ ಮಾಡಿದೆ.
ಇಡೀ ಪಾಕಿಸ್ತಾನದಲ್ಲಿ ಬ್ಲ್ಯಾಕ್ ಔಟ್ ಎಂದು ಘೋಷಣೆ ಮಾಡಲಾಗಿದೆ. ಇಸ್ಲಾಮಾಬಾದ್ನಲ್ಲೂ ಬ್ಲ್ಯಾಕ್ ಔಟ್ ಎಂದು ಅನೌನ್ಸ್ ಮಾಡಲಾಗಿದೆ ಎಂದು ಹೇಳಲಾಗಿದೆ. ಎಫ್- 16 ಹೆಸರಿನ ಒಂದು ಫೈಟರ್ ಜೆಟ್ ಹಾಗೂ ಜೆಎಫ್-17 ಹೆಸರಿನ ಎರಡು ಯುದ್ಧ ವಿಮಾನಗಳನ್ನು ಭಾರತದ ವಾಯು ಸೇನೆ ನೆಲಕ್ಕುರುಳಿಸಿತ್ತು. ಈ ಎಲ್ಲದರಿಂದ ಪಾಕಿಸ್ತಾನಕ್ಕೆ ಮತ್ತೆ ಭಾರೀ ಪೆಟ್ಟು ಬಿದ್ದಂತೆ ಆಗಿದೆ. ಬ್ಲ್ಯಾಕ್ ಔಟ್ ಘೋಷಣೆ ಮಾಡಿದ್ದರಿಂದ ಪಾಕಿಸ್ತಾನ ಕತ್ತಲಲ್ಲಿ ಮುಳುಗಿದಂತೆ ಆಗಿದೆ.
