ಪಾಕಿಸ್ತಾನ ನಿರಂತರವಾಗಿ ಭಾರತದ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿಗೆ ಯತ್ನಿಸುತ್ತಿದೆ. ಪಾಕ್​ನಿಂದ ಭಾರತದ ಮೇಲೆ ನೂರಕ್ಕೂ ಹೆಚ್ಚು ಕ್ಷಿಪಣಿಗಳು ದಾಳಿಗೆ ಯತ್ನ ನಡೆಸಿವೆ. ಭಾರತದ ಸೇನಾ ನೆಲೆಯನ್ನ ಟಾರ್ಗೆಟ್ ಮಾಡಿ ಪಾಕಿಸ್ತಾನ ದಾಳಿಗೆ ಯತ್ನಿಸಿದೆ.

ಚನಿ ಹಿಮತ್‌, ಆರ್‌ಎಸ್‌ ಪುರ, ಜಮ್ಮುವಿನಲ್ಲಿ ಪಾಕಿಸ್ತಾನದ ಕ್ಷಿಪಣಿಗಳು ದಾಳಿಗೆ ಯತ್ನಿಸಿವೆ. ಆದರೆ ಪಾಕಿಸ್ತಾನದ ಎಲ್ಲಾ​ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನ ಭಾರತ ಸೇನೆ ಹೊಡೆದುರುಳಿಸಿದೆ.

ಪಾಕಿಸ್ತಾನ ರಾಜಸ್ಥಾನ, ಪಂಜಾಬ್, ಜಮ್ಮುವನ್ನೇ ಗುರಿಯಾಗಿಸಿ ದಾಳಿಗೆ ಯತ್ನ ನಡೆಸಿದ್ದಾರೆ. ಪಾಕಿಸ್ತಾನದ 2 ಜೆಎಫ್​-17, 1 ಎಫ್​-16 ಫೈಟರ್ ಜೆಟ್ ಅನ್ನು ಭಾರತ​ ಧ್ವಂಸಗೊಳಿಸಿದೆ. ಒಟ್ಟು ಪಾಕಿಸ್ತಾನದ 8 ಕ್ಷಿಪಣಿಗಳನ್ನು ಭಾರತ ಸೇನೆ ಹೊಡೆದುಹಾಕಿದೆ.

ರಾಜಸ್ಥಾನದ ಜೈಸಲ್ಮೇರ್ ಮೇಲೂ ಪಾಕಿಸ್ತಾನ ಮಿಸೈಲ್ ದಾಳಿಗೆ ಯತ್ನ ನಡೆಸಿದೆ. ಆದರೆ ಭಾರತದ 4 ಏರ್ ಡಿಫೆನ್ಸ್ ಆ್ಯಕ್ಟಿವ್ ಆಗಿದ್ದು, ಪಾಕ್ ಮಿಸೈಲ್‌ಗಳನ್ನ ಹೊಡೆದುರುಳಿಸಿದೆ.

ಭಾರತದ ಪೃಥ್ವಿ ಏರ್ ಡಿಫೆನ್ಸ್ ಸಿಸ್ಟಮ್, ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್, ಆಕಾಶ್ ಏರ್ ಡಿಫೆನ್ಸ್ ಸಿಸ್ಟಮ್, ಎಸ್- 400 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್‌ಗಳು ಫುಲ್ ಆ್ಯಕ್ಟಿವ್ ಆಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *