
ಸಕಲೇಶಪುರ :- ಮನುಷ್ಯನ ದೇಹದಲ್ಲಿ ಪರಮಾತ್ಮನೆಂಭ ಚೈತನ್ಯ ಸ್ವರೂಪ ಇದೆ. ಅದಕ್ಕೆ ಬೆಲೆ. ಅದನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬೇಕು. ಅದಕ್ಕಾಗಿಯೆ ಮನುಷ್ಯ ಜೀವಂತವಿರುವಾಗ ಮಾತ್ರ ಬೆಲೆ. ಸತ್ತಾಗ ಬೆಲೆ ಇರುವುದಿಲ್ಲ.ಹಾಗಾಗಿ ಸಾವು ಬದುಕಿನ ನಡುವೆ ಸಮಾಜ ಏನಾದರೂ ಒಳ್ಳೆ ಕೊಡುಗೆಯನ್ನು ಸಮಾಜಕ್ಕೆ ಕೊಟ್ಟು ಹೋಗಬೇಕು.ಎಂದು ತೆಂಕಲಗೂಡು ಮಠದ ಶ್ರೀ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಯಸಳೂರು ಗ್ರಾಮದಲ್ಲಿರುವ ತೆಂಕಲಗೂಡು ಬೃಹನ್ಮಠದಲ್ಲಿ ಭಾನುವಾರ ‘ಪಂಚಮಹೋತ್ಸವ’-ಧಾರ್ಮಿಕ ಸಮ್ಮೇಳನ ಕಾರ್ಯಕ್ರಮ ನೆರವೇರಿತು. ಭಕ್ತರಿಗೆ ಹಾಸನದ ಇಂಡಿಯಾನಾ ಆಸ್ಪತ್ರೆಯ ವತಿಯಿಂದ ಉಚಿತ ಅರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನೆರದಿದ್ದ ಭಕ್ತಾದಿಗಳಿಗೆ ಆಶೀರ್ವಚನ ನೀಡುತ್ತಾ, ” ಪ್ರಸ್ತುತ ಪರಿಸ್ಥಿತಿಯಲ್ಲಿ ಜನರು ಒತ್ತಡದಿಂದ ಬದುಕುವಂತಾಗಿದೆ. ಇದರಿಂದ ಮುಕ್ತಿ ಹೊಂದಲು ದೈಹಿಕವಾಗಿ ಮಾನಸಿಕವಾಗಿ ನಾವು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ಮಠದಿಂದ ಆಶೀರ್ವಾದವನ್ನು ಮಾಡುವುದರ ಜೊತೆಗೆ ಮಠದ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂಬ ಸಂಕಲ್ಪವನ್ನು ಮಾಡಿ ಇತರದ ಆರೋಗ್ಯ ಶಿಬಿರವನ್ನು ಮಾಡಿಕೊಂಡು ಬರುತ್ತಿದ್ದೇವೆ. ಇದರ ಸದುಪಯೋಗವನ್ನು ಮಠದ ಸದ್ಭಕ್ತರು ಪಡೆದುಕೊಳ್ಳುವಂತಾಗಬೇಕು . ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಲಿಪೇಟೆ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಉದಯ್ ಮಾತನಾಡುತ್ತಾ ” ಮಠದ ಹಿಂದಿನ ಶ್ರೀ ಸ್ವಾಮಿಗಳು ಈ ಘಟಕಕ್ಕೆ 42 ವರ್ಷಗಳಿಂದ ಸುಸ್ಥಿತಿಗೆ ತರುವಲ್ಲಿ ಬಹಳ ಪ್ರಯತ್ನ ಹಾಗೂ ಬಹಳ ಕಾಳಜಿ ಹೊಂದಿದ್ದರು. ಜೊತೆಗೆ ಅವರಿಗೆ ಬಹಳ ಸಾಮಾಜಿಕ ಕಳಕಳಿ ಇತ್ತು. ಆ ಸಮಯದಲ್ಲೇ ಅವರು ಮುಂದಿನ ಸ್ವಾಮಿಗಳಿಗೆ ಸಾಕಷ್ಟು ಉಪದೇಶಗಳನ್ನು ಕೊಟ್ಟಿದ್ದರು.ಅದರಂತೆ ಇಂದಿನ ಸ್ವಾಮೀಜಿ ಹಾಕಿಕೊಟ್ಟ ಹಾದಿಯಲ್ಲಿ ನೆಡೆಸಿಕೊಂಡು ಹೋಗುತ್ತೀದ್ದಾರೆ.ಇತರದ ಸಮಾಜಮುಖಿ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಎಂದು ಕರೆ ನೀಡಿದರು.
ಹಾಸನದ ಇಂಡಿಯಾನಾ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ.ಅನೂಪ್ ಎಂ ಮಾತನಾಡಿ ” ನಾವು 18 ವರ್ಷದಿಂದ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಹೋಗಬೇಕು. ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ತಕ್ಕಂತೆ ಊಟ ತಿಂಡಿ ಹಾಗೂ ಒಳ್ಳೆಯ ನಿದ್ದೆ ದೇಹಕ್ಕೆ ಅವಶ್ಯಕ. ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಉತ್ತಮವಾದ ಆರೋಗ್ಯ ಅವಶ್ಯಕ. ಅದನ್ನು ಪಡೆದುಕೊಳ್ಳುವುದು ನಮ್ಮಲ್ಲಿಯೇ ಇದೆ. ಒಳ್ಳೆಯ ವಿಚಾರಗಳಿಗೆ ಹೆಚ್ಚು ನಾವು ಪ್ರೋತ್ಸಾಹ ಕೊಟ್ಟರೆ ನಮ್ಮ ದೇಹ ಮತ್ತು ಮನಸ್ಸು ಉಲ್ಲಾಸವಾಗಿರುತ್ತದೆ. ನಮ್ಮ ದೇಹಕ್ಕೆ ಹೃದಯವು ಅತ್ಯಂತ ಮುಖ್ಯವಾದ ಅಂಗವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ನಾವು ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗುವುದು ಅವಶ್ಯಕವಾಗಿದೆ. ನಮ್ಮ ಹಾಸನದ ಇಂಡಿಯಾನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ದಿನದ 24 ಗಂಟೆಗಳ ಕಾಲ ನುರಿತ ತಜ್ಞರಿಂದ ಸೇವೆ ಒದಗಿಸುತ್ತಾ ಇದೆ. ಇತರದ ಉಚಿತ ಆರೋಗ್ಯ ಶಿಬಿರಗಳನ್ನು ಮಾಡುವ ಮೂಲಕ ಜನರಿಗೆ ಅನುಕೂಲವಾಗುವ ಕೆಲಸವನ್ನು ಮಾಡುತ್ತಾ ಬಂದಿದೆ. ಎಂದರು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣದ ರತ್ತ ನಿಧಿ ಕೇಂದ್ರದ ಭರತ್ ಕುಮಾರ್, ಯಸಳೂರು ವೀರಶೈವ ಸಮಾಜದ ಉಪಾಧ್ಯಕ್ಷರಾದ ಚಂದ್ರು, ಹಾಸನ ಜಿಲ್ಲೆಯ ಇಂಡಿಯಾನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಮತ್ತು ಕೈ ಶಸ್ತ್ರ ಚಿಕಿತ್ಸೆಯ ತಜ್ಞರಾದ ಡಾಕ್ಟರ್ ನಹಿಮ್ ಸಿದ್ದಿಕ್, ಕಣ್ಣಿನ ತಜ್ಞರಾದ ಫಾರೂಕ್, ಇದ್ದರು




