
ಸಕಲೇಶಪುರ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ 93ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್ ಪಕ್ಷದ ವತಿಯಿಂದ ಮತ್ತು ಅವರ ಅಭಿಮಾನಿ ಬಳಗದಿಂದ ಭಾನುವಾರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರು ಹಾಗೂ ಟಿಎಪಿಸಿಎಂಎಸ್ ಸದಸ್ಯರಾದ ಜಾತಹಳ್ಳಿ ಪುಟ್ಟಸ್ವಾಮಿಗೌಡ ಮಾತನಾಡಿ ಈ ನಾಡಿನ ಮಣ್ಣಿನ ಮಗ ದೇಶ ಕಂಡ ಕನ್ನಡ ಮೊಟ್ಟ ಮೊದಲ ಪ್ರಧಾನಿ ಎಚ್ ಡಿ ದೇವೇಗೌಡ ಅವರ 93ನೇ ವರ್ಷದ ಹುಟ್ಟುಹಬ್ಬವನ್ನು ಇಲ್ಲಿನ ಕ್ರಾಫರ್ಡ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದ್ದು ದೇವೇಗೌಡ ಅವರು ಇನ್ನು ನೂರು ಕಾಲ ದೇವರ ಆಶೀರ್ವಾದದಿಂದ ಬಾಳಲಿ ಬದುಕಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.
ಜೆಡಿಎಸ್ ಯುವ ಮುಖಂಡ ವಳಲಹಳ್ಳಿ ಪ್ರಸಾದ್ ಗೌಡ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡ ಅವರು ನಮ್ಮಂತ ಅದೆಷ್ಟೋ ಯುವಕರಿಗೆ ಪ್ರೇರಣೆಯಾಗಿದ್ದು ಅವರ ವಿಚಾರಧಾರೆಗಳಲ್ಲಿ ನಾವು ಮುಂದುವರೆಯುತ್ತಿದ್ದೇವೆ ಅವರು ಇನ್ನು ಹಲವು ವರ್ಷಗಳ ಕಾಲ ಸೇವೆಯನ್ನು ಮಾಡಲು ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ ಅದಕ್ಷ ವಳಲಹಳ್ಳಿ ರಾಜೇಗೌಡ, ಹೆತ್ತೂರು ಸುಮಂತ್ ಹೆತ್ತೂರು, ಪ್ರಸಾದ್, ಅಸ್ಲಾಂ, ಗಿರೀಶ್, ಮದನ್, ಮಂಜು, ರಮೇಶ್, ಸುನಿಲ್, ರಾಮೇಗೌಡ, ರಂಜಿತ್, ದಿಲೀಪ್ ಮುಂತಾದವರು ಉಪಸ್ಥಿತರಿದ್ದರು
