
ಸಾಂಸ್ಕೃತಿಕತೆ ಹಿರಿಮೆ ಕಾಪಾಡಲು ಸರ್ಕಾರದ ಹೊಣೆಗೇಡಿತನ”ಪ್ರೋ.ಎಸ್.ಜಿ. ಸಿದ್ದರಾಮಯ್ಯ.
ಹಾಸನ- ;- ಸಾಹಿತ್ಯ, ಸಂಗೀತ, ಕಲೆ.ನೃತ್ಯ ಪ್ರಕಾರಗಳು ಸಾಂಸ್ಕೃತಿಕ ಜಗತ್ತಿನ ಹಿರಿಮೆ, ಇಂತಹ ಸಾಂಸ್ಕೃತಿಕತೆ ಹಿರಿಮೆಯ ಕಾಪಾಡಲು ಸರ್ಕಾರಗಳು ಹೊಣೆಗೇಡಿತನ ಮಾಡುತ್ತಿವೆ. ಇಂತಹ ಪರಿಷತ್ ತಿಗಳು ಘನತೆಯನ್ನು ಉಳಿಸಲು ಮುಂದಾಗಿ ಎಂದು ನಾಡಿನ ಹಿರಿಯ ಸಾಹಿತಿ ಪ್ರೋ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಇಂದು ಭಾನುವಾರ ಅಖಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇವರ ವತಿಯಿಂದ ನಡೆದ ಗೊರುಚ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿದ ಬಳಿಕ ಮಾತನಾಡಿದ ಅವರು ಇತ್ತೀಚಿನ ಸಾಹಿತ್ಯದ ಬಗ್ಗೆ ನಡೆಯುವ ಸಮ್ಮೇಳನಗಳಲ್ಲಿ ಕೋಟ್ಯಾಂತರ ಹಣವನ್ನು ವಿನಾಕಾರಣ ದುಂದು ವೆಚ್ಚ ಮಾಡುತ್ತಿರುವುದು ನಿಜಕ್ಕೂ ಶೋಚನೀಯ. ಸಾಹಿತ್ಯ ಸಂವರ್ಧನೆ ಇಲ್ಲದೆ ಕೇವಲ ಆಡಂಬರದ ಜಾತ್ರೆಗಳ ರೀತಿಯಲ್ಲಿ ನಡೆಯುತ್ತಿದೆ. ನಮ್ಮಲ್ಲಿ ಅದಷ್ಟೇ ಪ್ರತಿಭಾವಂತರು ನೂರಾರು ಪ್ರಶಸ್ತಿಗಳಿಂದ ವಂಚಿತರಾಗಿದ್ದಾರೆ. ಆದರೆ ಶರಣ ಸಾಹಿತ್ಯ ಪರಿಷತ್ತು ಅಗಮ್ಯ ಸಾಹಿತ್ಯ ಕೃಷಿ ಮಾಡುವ ಅರ್ಹರಿಗೆ ಪ್ರಶಸ್ತಿ ನೀಡುತ್ತಾ ಬಂದಿರುವುದು ಅನನ್ಯವಾಗಿದೆ. ದಿನ ಕಳೆದಂತೆ ಸರ್ಕಾರಿ ಶಾಲೆಯಲ್ಲಿ ಪಾಠ ನಡೆಸುವ ಶಿಕ್ಷಕರ ಕೊರತೆ ಕಾಣುತ್ತಿದೆ. ಅಂತಯೇ ಮಕ್ಕಳ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ. ಸರ್ಕಾರಗಳು ಕನ್ನಡ ಶಾಲೆಯನ್ನು ಉಳಿಸಲು ಮುಂದಾಗಬೇಕಿದೆ ಇಲ್ಲವಾದರೆ ಮುಂದಿನ ದಿನದಂದು ಕೆಟ್ಟ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ರಾಜ್ಯಾಧ್ಯಕ್ಣರಾದ ಡಾ. ಸಿ. ಸೋಮಶೇಖರ ಮಾತನಾಡಿ, ಜಾನಪದ ಮತ್ತು ಶರಣ ಸಾಹಿತ್ಯಗಳು ನಾಡಿನ ಸಾಹಿತ್ಯದಲ್ಲಿ ಎರಡು ಕಣ್ಣುಗಳು, ಇಂತಹ ಜಾನಪದ ಮತ್ತು ಶರಣ ಸಾಹಿತ್ಯ ಸಮ್ಮಿಲನದ ಪ್ರತಿರೂಪವೇ ಗೊ.ರು. ಚನ್ನಬಸಪ್ಪನವರು. ಅವರಿಗೆ ಇಂದು ಜನ್ಮ ದಿನ. 97 ನೇ ವರ್ಷದ ಪೂರೈಸಿದ ಗೊರುಚ ಶರಣ ಸಾಹಿತ್ಯ ಪರಿಷತ್ತಿನ ನಾಡು, ಹೊರ ಜಿಲ್ಲೆ ಮತ್ತು ವಿದೇಶದಲ್ಲಿ ಕೂಡ ಶರಣ ಸಾಹಿತ್ಯದ ಕಂಪನ್ನು ಪಸರಿಸಿದ ಕೀರ್ತಿ ಗೊರುಚ ಅವರಿಗೆ ಸಲ್ಲುತ್ತದೆ. ಸುತ್ತೂರಿನ ಈ ಹಿಂದಿನ ಜಗದ್ಗುರುಗಳು ತಮ್ಮ ಜನ್ಮ ದಿನದ ಅಂಗವಾಗಿ ಶರಣ ಸಾಹಿತ್ಯವನ್ನು ಉಳಿಸಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿದ್ದಾರೆ.
ಅಂದಿನಿಂದ ಎರಡು ದಶಕಗಳ ಕಾಲ ಗೊ.ರು.ಚ ರಾಜ್ಯಾಧ್ಯಕ್ಷರಾಗಿ ಅವಿರತ ಕೆಲಸ ಮಾಡಿದ್ದಾರೆ. ಶರಣ ಸಾಹಿತ್ಯ ಪರಿಷತ್ತಿಗೆ ಅಗಮ್ಯ ಸೇವೆ ಸಲ್ಲಿಸಿದ ಗೊರುಚ ಅವರ ಹೆಸರಿನಲ್ಲಿ ಇಂದು ದತ್ತಿ ಪ್ರಶಸ್ತಿಯನ್ನು ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿಯನ್ನು ಡಾ. ಮೊಗಳ್ಳಿ ಗಣೇಶ್, ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ ಡಾ.ಟಿ.ಆರ್. ಚಂದ್ರಶೇಖರ, ಡಾ.ಶಾಂತಾ ಇಮ್ರಾಪುರ, ಪ್ರೋ.ಜಗನ್ನಾಥ ಹೆಬ್ಬಾಳೆ ಇವರಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಹಾಸನದ ಶರಣ ಸಾಹಿತ್ಯ ಪರಿಷತ್ತು ಅತ್ಯಂತ ಅಚ್ಚುಕಟ್ಟಾಗಿ ರೂಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ್ ಗಾಂಜಿ, ವ್ಯವಸ್ಥಾಪಕರು ಪುಟ್ಟರಾಜು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಹೆಚ್.ಎಲ್. ಮಲ್ಲೇಶಗೌಡ, ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ, ರಾಜ್ಯ ಕಾರ್ಯದರ್ಶಿ ಸೋಮಶೇಖರ ಗಾಂಜಿ,ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ತೀರ್ಥಕುಮಾರಿ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಖಜಾಂಚಿ ರುದ್ರಸ್ವಾಮಿ, ಹಾಸನ ತಾಲ್ಲೂಕು ಅಧ್ಯಕ್ಷರು ಪುಟ್ಟರಾಜು, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಬಾಕ್ಸ್ ನ್ಯೂಸ್ 12 ನೇ ಶತಮಾನದಲ್ಲಿನ ಅಸಮಾನತೆ, ಶೋಷಣೆ, ಜಾತೀಯತೆ, ಧರ್ಮಾಂಧತೆಯನ್ನು ಖಂಡಿಸಿ ಸಮ ಸಮಾಜಕ್ಕೆ ಬೂನಾದಿ ಹಾಕಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಇಂತಹ ಅಮೂಲ್ಯ ಸಾಹಿತ್ಯವನ್ನು ಉಳಿಸಲು ಸುತ್ತೂರಿನ ಜಗದ್ಗುರು ತಮ್ಮ ಜನ್ಮ ದಿನದ ಬದಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡುವ ಮೂಲಕ ನಾಡಿನಲ್ಲಿ ಶರಣ ವಿಚಾರಗಳನ್ನು ತಿಳಿಸುತ್ತಾ ಬಂದಿದ್ದಾರೆ. ಸದ್ಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ತಕ್ಷರಾದ ಐಎಎಸ್ ಡಾ.ಸಿ.ಸೋಮಶೇಖರ ಅವರು ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾಗಲಿ ಎಂದು ಹಾಸನ ದ ತಣ್ಣೀರುಹಳ್ಳ ಮಠದ ಪೂಜ್ಯ ಶ್ರೀ ವಿಜಯಕುಮಾರ ಮಹಾಸ್ವಾಮಿಗಳು ತಿಳಿಸಿದರು.
