ಬೇಲೂರು : ಪಟ್ಟಣದ ರಾಯಪುರದ ಬಳಿ ಅಕ್ರಮವಾಗಿ ಹಾಸನದ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಗೂಡ್ಸ್ ವಾಹನದಲ್ಲಿ ಹಾಸನ ಸಂತೆಯಿಂದ ಖರೀದಿ ಮಾಡಿ ಚಿಕ್ಕಮಗಳೂರು ಗೆ ಸಾಗಿಸುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ಮಾಹಿತಿ ತಿಳಿದ ತಕ್ಷಣ ಬೇಲೂರು ಪಿಎಸ್ಐ ಎಸ್ ಜಿ ಪಾಟೀಲ್ ನೇತೃತ್ವದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಕೆಎ ೧೩ ಬಿ ೪೦೧೦ ನಂಬರ್ ನ ಗೂಡ್ಸ್ ವಾಹನ ಹಿಂಬಾಲಿಸಿ ಅಡ್ಡಗಟ್ಟಿ ಚಾಲಕನನ್ನು ವಿಚಾರಿಸಿದಾಗ ಹಾಸನದ ಸಂತೆಯಿಂದ ಚಿಕ್ಕ ಕರುಗಳು ಸೇರಿದಂತೆ ಒಟ್ಟು ೧೨ ಕರುಗಳನ್ನು ಅಕ್ರಮವಾಗಿ ಖಸಾಯಿ ಕಾನೆಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ.

ವಾಹನದ ಸಮೇತ ಜಪ್ತಿ ಮಾಡಿ ಚಾಲಕ ಖಲೀಲ್ ಪಾಷ ಈತನನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಂತರ ಜಾನುವಾರುಗಳನ್ನು ಗೋ ಶಾಲೆಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಧಾನ ಸಂಚಾಲಕ ನಾಗೇಶ್ (ಗುಂಡ) ಈಗಾಗಲೆ ಹಲವಾರು ಬಾರಿ ಗೋವುಗಳನ್ನು ಖಸಾಯಿಕಾನೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ಪೋಲಿಸ್ ಇಲಾಖೆ ಪುರಸಭೆ ಹಾಗು ಕಂದಾಯ ಇಲಾಖೆಗಳು ಪ್ರತಿಬಾರಿ ತಿಂಗಳಿಗೊಮ್ಮೆದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಗೋ ಮಾಂಸ ಹಾಗು ಗೋವುಗಳನ್ನು ರಕ್ಷಣೆ ಮಾಡುತ್ತಿದೆ‌.ಆದರೂ ವ್ಯಾಪಕವಾಗಿ ಕದ್ದುಮುಚ್ಚಿ ಇಂತಹ ಪ್ರಕರಣಗಳು ದಾಖಲಾಗುತ್ತಿದೆ. ಇಂತಹ ಅಕ್ರಮಗಳ ಮೇಲೆ ಹೆಚ್ಚಿನ ರೀತಿಯಲ್ಲಿ ಕಾನೂನು ಜಾರಿಯಾಗಬೇಕು ಎಂದರು.

ದಾಳಿ ಸಂದರ್ಭದಲ್ಲಿ ಪೊಲಿಸ್ ಇಲಾಖೆ ದೇವರಾಜು,ದೇವೇಂದ್ರ,ಅಣ್ಣಪ್ಪ,ಹಾಗು ವಿಶ್ವ ಹಿಂದೂಪರಿಷತ್ ನ ಕಾರ್ಯಕರ್ತರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *