ಸಕಲೇಶಪುರ : ತಾಲೂಕಿನ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ಕಂಪ್ಯೂಟರ್ ಶಾಖೆಯನ್ನು ಅಧ್ಯಕ್ಷರಾದ ವೈ ಪಿ ರಾಜೇಗೌಡ, ಉಪಾಧ್ಯಕ್ಷರಾದ ವಳಲಹಳ್ಳಿ ವೀರೇಶ್, ಗ್ಯಾರೆಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷರು, ಹಾಗೂ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ಉದ್ಘಾಟಿಸಿ ಚಾಲನೆ ನೀಡಿದರು,

ಇದೆ ಸಂದರ್ಭದಲ್ಲಿ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾದ ವೈ ಪಿ ರಾಜೇಗೌಡ ಮಾತನಾಡಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲ ವಾಗಲೆಂದು ಬ್ಯಾಂಕ್ ನಲ್ಲಿಯೆ ಪಹಣೆ, e-ಸ್ಟಾಂಪ್, ಅನ್ ಲೈನ್ ಆರ್ಜಿ, ಸೇರಿದಂತೆ ವಿವಿದ ಸೌಲಭ್ಯಗಳು ಬ್ಯಾಂಕ್ ನಲ್ಲಿ ದೊರೆಯಲಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು ಎಂದರು.

ಇದೆ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಳಲಹಳ್ಳಿ ವೀರೇಶ್ ಮಾತನಾಡಿ ನಮ್ಮ ಬ್ಯಾಂಕ್ ನಲ್ಲಿ ಅನ್ ಲೈನ್ ಸೇವೆ ದೊರಕುವುದರಿಂದ ರೈತರಿಗೆ ಅನುಕೂಲ ವಾಗಲಿದ್ದು ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು, ಹಾಗೂ ರೈತರ ಅನುಕೂಲಕ್ಕಾಗಿ, ಮತ್ತು ಬ್ಯಾಂಕ್ ಅಭಿವೃದ್ದಿಗಾಗಿ ಸಂಬದ ಪಟ್ಟ ಸಚಿವರ ಹತ್ತಿರ ಚರ್ಚಿಸಿ ಹೆಚ್ಚಿನ ಅನುದಾನ ತರುವುದಾಗಿ ಳಿಸಿದರು,

ಈ ಸಂದರ್ಭದಲ್ಲಿ ನಿರ್ದೇಸಕರಾದ ಹೆಚ್ ಹೆಚ್ ಉದಯ್,ವಿಜಯ ಕುಮಾರ್, ವೆದುನಂದನ್ ಶೆಟ್ಟಿ, ನಾಗರಾಜ್, ಹಿತೈಷಿ, ಬ್ಯಾಂಕ್ ವ್ಯವಸ್ಥಾ ಪಕರಾದ ಮಂಜುಳ ಸಿಬಂದಿ ವರ್ಗ ಸೇರಿದಂತೆ ಇತರೆ ಸದಸ್ಯರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *