
ಸಕಲೇಶಪುರ :- ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಪ್ರಾರಂಭವಾಗಿ 8ರಿಂದ 10 ವರ್ಷ ಕಳೆಯುತ್ತ ಬಂದರು ಕಾಮಗಾರಿಯನ್ನು ಸಂಪೂರ್ಣ ಮುಗಿಸಿಲ್ಲ. ಹಾಗೂ ಕಳಪೆ ಕಾಮಗಾರಿಯನ್ನು ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಕಾಮಗಾರಿಯನ್ನು ಸರಿಯಾದ ರೀತಿ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಸಕಲೇಶಪುರದಿಂದ ಮಾರನಹಳ್ಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಬರುವ ಆನೆಮಹಲ್ ಹತ್ತಿರ ಅವೈಜ್ಞಾನಿಕ ಕಾಮಗಾರಿಯಿಂದ ತಡೆ ಗೋಡೆ ಕುಸಿತ ಉಟಾಂಗಿತ್ತು.
ಈ ವರ್ಷವು ಕುಸಿತ ಉಟಾಂಗಿದೆ ಆದೇ ರೀತಿ ದೋಣಿಗಲ್ ಹತ್ತಿರ ಕುಸಿತ ಉಟಾಂಗಿ 3 ವರ್ಷ ಕಳೆದರು ಇನ್ನು ಕೂಡ ಆ ಒಂದು ರಸ್ತೆಯ ದುರಸ್ಥಿಯ ಕಾಮಗಾರಿಯನ್ನು ಇನ್ನೂ ಕೂಡ ಕೈಗೆ ಎತ್ತುಕೊಂಡಿಲ್ಲ ಹೀಗಾಗಲೆ ಮಳೆಗಾಲ ಪ್ರಾರಂಭವಾಗಿದೆ ಅದ್ದರಿಂದ ಈ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೆತ್ತಿಕೋಳದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷರಾದ ಗಗನ್ ಹಾಡಹಳ್ಳಿ ಅವರ ನೇತೃತ್ವದಲ್ಲಿ ಬೃಹತ್ ಮಟ್ಟದ ಹೋರಟವನ್ನು ನೆಡಸಲಾಗುವುದು ಎಂದು ಈ ಮೂಲಕ ಎಚ್ಚರಿಸಿದ್ದಾರೆ.
