
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಹೆತ್ತೂರು: ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕ 2024-25ನೇ ಸಾಲಿನ ಎಸ್. ಎಸ್. ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 30 ವಿದ್ಯಾರ್ಥಿಗಳಿಗೆ ( ಹೆತ್ತೂರು ಹೋಬಳಿಯ 7 ಪ್ರೌಢ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಾನ್ವಿ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಿದ್ದಗಂಗಾ ಪ್ರೌಡ ಶಾಲೆ ಶುಕ್ರವಾರ ಸಂತೆ, ಮಲ್ಲೇಶ್ವರ ಪ್ರೌಢಶಾಲೆ ಹೆಚ್ ವಿ ಹಳ್ಳಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಹೆತ್ತೂರು, ಸರ್ಕಾರಿ ಪ್ರೌಢಶಾಲೆ ಹೊಂಗಡಹಳ್ಳ, ಸರ್ಕಾರಿ ಪ್ರೌಢಶಾಲೆ ವಣಗೂರು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಹೆತ್ತೂರು), ದಿನಾಂಕ 31.05..2025ನೇ ಶನಿವಾರ ಬೆಳಗ್ಗೆ 10:30ಕ್ಕೆ ಹೆತ್ತೂರು ಹೋಬಳಿ ಬೆಳಗಾರರ ಸಂಘದ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಈ ಕಾರ್ಯಕ್ರಮಕ್ಕೆ ಸಾಹಿತ್ಯ ಪರಿಷತ್ ಸದಸ್ಯರು,ಕನ್ನಡ ಅಭಿಮಾನಿಗಳು, ಕನ್ನಡಪರ ಸಂಘಟನೆಯ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹೆತ್ತೂರು.ಅಧ್ಯಕ್ಷರು ಎಚ್. ಪಿ. ರವಿಕುಮಾರ್ ಕಾರ್ಯದರ್ಶಿಗಳಾದ ಅತ್ತಿಗನಹಳ್ಳಿ ಸುರೇಶ್, ರೇಷ್ಮಾ ರಾಮಚಂದ್ರ, ಪದಾಧಿಕಾರಿಗಳು ಕೋರಿದ್ದಾರೆ.
