ಹಾಸನ : ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 11 ಅಭ್ಯರ್ಥಿಗಳು ಭಾರಿ ಅಂತರದ ಜಯವನ್ನು ಸಾಧಿಸಿದ್ದಾರೆ.

ಅಧ್ಯಕ್ಷರಾಗಿ ಸಿಂಗಟಿಗೆರೆ ಮಮತಾ ರಘುನಾಥ್ ಹಾಗೂ ನಿಟ್ಟೂರು ಗ್ರಾಮದ ಜಗದೀಶ್ ರವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಹಾಸನ : ತಾಲೂಕಿನ ಸಾಲಗಾಮೆ ಹೋಬಳಿ ನಿಟ್ಟೂರು ಯಲಗುಂದ ಕುದುರೆಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 11 ಅಭ್ಯರ್ಥಿಗಳು ಭಾರಿ ಅಂತರದ ಜಯವನ್ನು ಸಾಧಿಸಿದ್ದಾರೆ ,

ಇದಕ್ಕೆ ಕಾರಣ ಹಾಸನ ಕ್ಷೇತ್ರದ ಜನಪ್ರಿಯ ಶಾಸಕರಾದ ಸ್ವರೂಪ್ ಮಾರ್ಗದರ್ಶನದಂತೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸೋಮನಹಳ್ಳಿ ನಾಗರಾಜಣ್ಣನವರು ಲಿಂಗರಸನಹಳ್ಳಿ ರಂಗಸ್ವಾಮಿರವರು ಹಾಗೂ ಹಾಸನ ಮತ್ತು ಯಲಗುಂದ ನಿಟ್ಟೂರು ಕುದುರೆಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರು ಮತ್ತು ಹನ್ನೊಂದು ಸದಸ್ಯರ ಸಹಕಾರದೊಂದಿಗೆ ಇಂದು ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸಿಂಗಟಿಗೆರೆ ಮಮತಾ ರಘುನಾಥ್ ರವರನ್ನು ಅಧ್ಯಕ್ಷರು ಹಾಗೂ ನಿಟ್ಟೂರು ಗ್ರಾಮದ ಜಗದೀಶ್ ರವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *