ಸಕಲೇಶಪುರ: ಈದುಲ್ ಅಝ್ಹಾ (ಬಕ್ರೀದ್) ಆಚರಣೆಯ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಹಾಗೂ ತಾಲೂಕಿನ ವಿವಿಧ ಜುಮಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ, ವಿವಿಧ ಜಾಮಿಯ ಮಸೀದಿಗಳ ಇಮಾಮರ ನೇತೃತ್ವದಲ್ಲಿ ನಡೆಸಿದರು.

ಸರ್ವ ಜನತೆಗೆ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಪಟ್ಟಣದ ಬದ್ರಿಯಾ ಜುಮಾ ಮಸೀದಿಯ ಧರ್ಮಗುರು ಅಬ್ದುಲ್ ರಜಾಕ್ ಸಖಾಫಿ, ಬಕ್ರೀದ್ ಹಬ್ಬವು ಶಾಂತಿ, ಸಮಾನತೆ, ಸಹೋದರತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುತ್ತದೆ. ಮಾನವೀಯತೆಯೇ ಧರ್ಮಗಳ ಮೂಲವಾಗಿದ್ದು, ಇದನ್ನು ಅರಿತುಕೊಂಡು ಬಾಳಬೇಕು ಎಂದರು.

ಇಸ್ಲಾಂ, ಯಹೂದಿ ಮತ್ತು ಕ್ರೈಸ್ತ – ಈ ಮೂರೂ ಧರ್ಮಗಳು ಪ್ರವಾದಿ ಇಬ್ರಾಹೀಮರನ್ನು ಗೌರವಿಸುತ್ತವೆ. ಇವರು, ಇವರ ಮಗ ಇಸ್ಮಾಈಲ್ ಮತ್ತು ತಾಯಿ ಹಾಜರರ ಬಗ್ಗೆ ಈ ಮೂರೂ ಧರ್ಮದಲ್ಲೂ ವಿಚಾರಗಳಿವೆ. ಬೈಬಲ್, ತೋರ ಮತ್ತು ಪವಿತ್ರ ಕುರ್‌ಆನ್‌ಗಳಲ್ಲಿ ಇವರ ಬಗ್ಗೆ ವಿಸ್ತಾರವಾದ ವಿವರಗಳಿವೆ. ಇಬ್ರಾಹೀಮ್ ಅಂದರೆ ಅಚಂಚಲ ದೇವ ವಿಶ್ವಾಸ, ನಂಬಿದ ಸಿದ್ಧಾಂತಕ್ಕಾಗಿ ಸರ್ವವನ್ನೂ ತ್ಯಾಗ ಮಾಡಲು ಸಿದ್ಧವಾಗುವ ಬದ್ಧತೆ ಮತ್ತು ಅಪಾರ ಧೈರ್ಯ – ಇವು ಮೂರರ ಸಂಗಮ ಎಂದು ಹೇಳಬಹುದು ಎಂದರು. ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಸಮೋಹಿಕ ಪ್ರಾರ್ಥನೆ ನಂತರ, ಪರಸ್ಪರ ಆಲಿಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಈದ್ ಮೈದಾನದಿಂದ ಪಟ್ಟಣದ ಜಾಮಿಯ ಮಸೀದಿಯವರೆಗೂ ರಾಜ್ಯಬೀದಿಯಲ್ಲಿ ಮರವಣಿಗೆ ನಡೆಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *