ಸಕಲೇಶಪುರ :-ನಗರದ ಚಂಪಕನಗರ ಬಡಾವಣೆಯ ಜನತಾ ಹೌಸ್ ನಲ್ಲಿ ಕಾಂಕ್ರೀಟ್ ರಸ್ತೆ ಉದ್ಗಾಟಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜುನಾಥ್ ಕಳೆದ ಹಲವಾರು ದಶಕಗಳಿಂದ ಜನತಾ ಹೌಸ್ ರಸ್ತೆಗಳು ಅಭಿವೃದ್ಧಿ ಹೊಂದಿರಲಿಲ್ಲ ಇಂದು ಕಾಂಕ್ರೀಟ್ ರಸ್ತೆ ಉದ್ಗಾಟನೆ ಮಾಡುತ್ತಿದ್ದು ಸಂತಸ ವ್ಯಕ್ತಪಡಿಸಿದರು

ಇನ್ನೂ ಈ ಬಡಾವಣೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲಾ ಸರ್ಕಾರದ ಅನುದಾನ ಕೇವಲ ಭಾಗ್ಯಗಳಿಗೆ ಬಳಕೆಯಾಗುತ್ತಿದ್ದು ಮುಂದಿನ ಅನುದಾನವನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿ ಪಡಿಸುತ್ತೆನೆ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ನಿರ್ವಹಣೆ ಸರಿಯಾಗಿಲ್ಲ ಈ ಹಿಂದೆ ಚರಂಡಿಯನ್ನು ಪೌರ ಕಾರ್ಮಿಕರಿಂದ ಸ್ವಚ್ಚತೆ ನಿರಂತರವಾಗಿ ನಡೆಯುತ್ತಿತ್ತು ಈಗ ಅಷ್ಟಾಗಿ ನಡೆಯತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು

ಅಲ್ಲಿಯೇ ಇದ್ದ ಪುರಸಭಾ ಮುಖ್ಯಾಧಿಕಾರಿಗೆ ಚರಂಡಿ ಸ್ವಚ್ಚತೆ ಮಾಡುವಂತೆ ಹಾಗೂ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದ್ದು ಅದಕ್ಕೆ ಕಡಿವಾಣ ಹಾಕಲು ಏನು ಕ್ರಮ ಕೈಗೊಂಡಿದ್ದೀರಿ ಅದರ ಬಗ್ಗೆ ಮಾಹಿತಿ ಒದಗಿಸಲು ತಾಕೀತು ಮಾಡಿದರು

ನಂತರ ಪಾರ್ಕಿಗೆ ಮೀಸಲಾದ ಸ್ಥಳವನ್ನು ಕೆಲ ಪ್ರಭಾವಿ ವ್ಯಕ್ತಿಗಳು ಕಬಳಿಸಲು ಪ್ರಯತ್ನಿಸುತ್ತಿರುವುದ ನಮ್ಮ ಗಮನಕ್ಕೆ ಬಂದಿದ್ದು ಆ ಜಾಗದ ದಾಖಲೆಯನ್ನು ಬೇಗ ಕೊಡಬೇಕೆಂದರು.

ಈ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಾಧಿಕಾರಿ ಮಹೇಶ್, ಕಂಟ್ರಾಕ್ಟರ್ ಕೆ ವಿಶ್ವನಾಥ್, ಸುಸ್ಮೀತಾ ರವಿ ,ಮಾಸ್ಟರ್ ಸಿದ್ದಲಿಂಗಯ್ಯ, ರವಿಕುಮಾರ್, ಸಿ ಆನಂದ್, ಮೊಹನ್ ಕುಮಾರ್, ಲಕ್ಮಣ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *