ಸಕಲೇಶಪುರ: ಬೀದಿ ಬದಿ ತರಕಾರಿ ವ್ಯಾಪಾರಸ್ಥನೋರ್ವನನ್ನು ಒಕ್ಕಲೆಬ್ಬಿಸಲು ಮುಂದಾದ ಪುರಸಭಾ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಾರ್ವಜನಿಕರು ಛೀಮಾರಿ ಹಾಕಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಕಳೆದ ಕೆಲವು ತಿಂಗಳುಗಳಿಂದ ಅಣ್ಣಪ್ಪ ಎಂಬಾತ ರಸ್ತೆ ಬದಿ ಕೆ.ಜಿಗೆ 40 ರೂನಂತೆ ತರಕಾರಿ ವ್ಯಾಪಾರ ಮಾಡುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಿದೆ. ಆದರೆ ಇದನ್ನು ಸಹಿಸದ ಕೆಲವರು ಪುರಸಭೆಯ ಕೆಲವು ಸದಸ್ಯರಿಗೆ ಆತನನ್ನು ಒಕ್ಕಲೆಬ್ಬಿಸಲು ಒತ್ತಡ ಹೇರಿದ್ದು ಈ ಹಿನ್ನೆಲೆಯಲ್ಲಿ ಅಣ್ಣಪನಿಗೆ ಪುರಸಭೆಯವರು ವಿಪರೀತ ಕಿರುಕುಳ ನೀಡುತ್ತಿದ್ದು ಹೀಗಾಗಿ ಆತ ಹಲವು ದಿನಗಳಿಂದ ತರಕಾರಿಯನ್ನು ಮಾರಲಾಗದೆ ಬೀದಿಗೆ ಬರುವಂತಾಗಿದೆ

ಹಾಗೂ ಹೀಗೂ ಸೋಮವಾರ ಆತ ತರಕಾರಿ ವ್ಯಾಪಾರ ಮಾಡುವಾಗ ಬಂದ ಪುರಸಭೆಯ ಮುಖ್ಯಾಧಿಕಾರಿ ಮಹೇಶ್ವರಪ್ಪ ಆತನಿಗೆ ಇಲ್ಲ ಸಲ್ಲದ ಒತ್ತಡ ಹೇರಿ ಬೆದರಿಸಿ ಆತನನ್ನು ಸ್ಥಳದಿಂದ ಎತ್ತಂಗಡಿ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಕರವೇ ಪ್ರವೀಣ್ ಶೆಟ್ಟಿ ಬಣದ ರಮೇಶ್ ಪೂಜಾರಿ, ಹಾಜರಿದ್ದ ಕೆಲವು ಪತ್ರಕರ್ತರು, ಸಾರ್ವಜನಿಕರು ಪುರಸಭಾ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಟ್ಟಣದಲ್ಲಿ ಎಲ್ಲೆಡೆ ಬೀದಿ ಬದಿ ವ್ಯಾಪಾರಸ್ಥರಿದ್ದು ಇವರುಗಳನ್ನು ಒಕ್ಕಲೆಬ್ಬಿಸಿದೆ ಇವನೊಬ್ಬನನ್ನು ಮಾತ್ರ ಒಕ್ಕೆಲೆಬ್ಬಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿಗಳು ಸ್ಥಳದಿಂದ ಹಿಂತಿರುಗಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *