
ಸಕಲೇಶಪುರ: ಸಾರ್ವಜನಿಕರು ಹಾಗೂ ರೈತರು ಓಡಾಡುವ ರಸ್ತೆಗೆ ವಾಹನಗಳನ್ನು ಅಡ್ಡ ನಿಲ್ಲಿಸಿ ಹೋಂ ಸ್ಟೇ ಗೆ ಬಂದ ಅತಿಥಿಗಳು ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರ ಮೇಲೆ ಹಲ್ಲೆ ಆರೋಪ
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ, ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿನ್ನಹಳ್ಳಿ ಗ್ರಾಮದ ರಾಸ್ತ ಹೋಂಸ್ಟೇಗೆ ಬಂದ ಪ್ರವಾಸಿಗರು ಅಭಿ ಗಂಡಿ ಫಾಲ್ಸ್ ಹತ್ತಿರ ಕಾರು, ಜೀಪು ರಸ್ತೆಯ ಮಧ್ಯ ಭಾಗದಲ್ಲಿ ಅಡ್ಡಲಾಗಿ ನಿಲ್ಲಿಸಿಕೊಂಡು ಮದ್ಯಪಾನ ಮಾಡಿ ಆಮಲಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕ್ಯಾನಹಳ್ಳಿ ರಸ್ತೆಯ ಅಭಿ ಗಂಡಿಫಾಲ್ಸ್ ಹತ್ತಿರ ಪ್ರವಾಸಿಗರು ವಾಹನಗಳನ್ನು ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಲಾಗಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಓಡಾಡಲು ಅವಕಾಶ ಮಾಡಿಕೊಡಿ ಎಂದು ಸ್ಥಳೀಯರಾದ ಕಿರಣ್ ಕೇಳಿದ ಸಂದರ್ಭದಲ್ಲಿ ಕಿರಣ್ ಮೇಲೆ ಪ್ರವಾಸಿಗರು ಹಲ್ಲೆ ಮಾಡಿರುತ್ತಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರೂ ಸಹ ಇದುವರೆಗೂ ಕೇಸು ದಾಖಲಿಸಿರುವುದಿಲ್ಲ ಎಂದು ಮಾನ್ಯ ಉಪ ವಿಭಾಗಾಧಿಕಾರಿಗಳಿಗೆ ಸ್ಥಳೀಯರು ಹಾಗು ಗ್ರಾಮಸ್ಥರು ದೂರು ನೀಡಿರುತ್ತಾರೆ. ಹಾಗೆಯೇ ಅನಧಿಕೃತ ಹೋಂಸ್ಟೇ ಗಳಿಂದ ಪ್ರತಿನಿತ್ಯ ಹೊರ ಜಿಲ್ಲೆಯಿಂದ ಬಂದ ಪ್ರವಾಸಿಗರು ಮದ್ಯಪಾನ ಮಾಡಿ ಬಾಟಲಿಗಳು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಹಾಕುವುದು, ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದು, ಹಾಗೂ ಡಿಜೆ ಪಟಾಕಿ ಸಿಡಿಸುವುದು ಇದರಿಂದ ಕಾಡಾನೆ, ಹಾಗೂ ಕಾಟಿ, ಇತರ ಪ್ರಾಣಿಗಳು ಹೆದರಿಕೊಂಡು ಗ್ರಾಮದ ಒಳಗೆ ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ವಿವರಿಸಿದ ಅವರು ಇಂತಹವುಗಳಿಗೆ ತಾಲೂಕು ಆಡಳಿತ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಳಲಹಳ್ಳಿ ಬೆಳೆಗಾರ ಸಂಘದ ಅಧ್ಯಕ್ಷರಾದ ದರ್ಶನ್, ಮಾಜಿ ಬೆಳೆಗಾರ ಸಂಘದ ಅಧ್ಯಕ್ಷರಾದ ಬಾಲು, ಗಡಿ ಚೌಡೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷರಾದ ಪ್ರಜ್ವಲ್, ರಾಮೇಗೌಡ, ವಳಲಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರುದ್ರೇಶ್ ಜಯಪ್ಪಗೌಡ ಧರ್ಮರಾಜ್ ಸುರೇಶ್, ಯಮುನಾ, ಗಿಡ್ಡೆ ಗೌಡ, ಅರುಣ್ ರಮೇಶ್, ಕೀರ್ತಿ, ಪುನೀತ್, ಇತರ ಗ್ರಾಮಸ್ಥರು ಹಾಜರಿದ್ದರು.
