
6 ಲಕ್ಷ ಕಾಫಿ ಬೆಳೆ ಸಂಪೂರ್ಣ ನಾಶ. ವಳಲಹಳ್ಳಿ ಗ್ರಾಮಪಂಚಾಯಿತಿ ಬಳೆಗಾರರ ಸಂಘದಿಂದ ಭೇಟಿ ಮಾಡಿ ಪರಿಶೀಲನೆ.ಉಳಿದ ಕಾಫಿ ಗಿಡ ಉಳಿಸಿಕೊಳ್ಳಲು ಔಷಧಿ ವೆಚ್ಚ ಬಯಸುವ ಭರವಸೆ ನೀಡಿದ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘ.
ಸಕಲೇಶಪುರ :- ಕಾಫಿ ತೋಟದ ಕೆಲಸದಲ್ಲಿ ಕಾರ್ಮಿಕರ ಅಚಾತುರ್ಯದಿಂದ ಸಿಂಪಡಿಸುವ ಔಷಧಿಯ ಬದಲು ಕಳೆನಾಶಕವನ್ನು ಸಿಂಪಡಿಸಿ ಸುಮಾರು 2 ಎಕರೆ ಕಾಫಿ ಗಿಡವು ಸುಟ್ಟು ಕರಕಲಾಗಿದ್ದು, ಸುಮಾರು 6 ಲಕ್ಷಕ್ಕೂ ಹೆಚ್ಚು ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ.
ತಾಲ್ಲೂಕಿನ ಯಸಳೂರು ಹೋಬಳಿ ಯಡಿಕೆರೆ ಗ್ರಾಮದ ಕಾಫಿ ಬೆಳೆಗಾರರಾದ ವೈ.ಕೆ ಸುಬ್ಬೆಗೌಡರ ಎರಡು ಎಕರೆ ತೋಟದಲ್ಲಿ ರೋಬೊಸ್ಟ್ ಕಾಫಿ ಬೆಳೆಗೆ ಮಳೆಗಾಲದಲ್ಲಿ ಉತ್ತಮ ಫಸಲು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಟಪ್ ಔಷಧಿಯನ್ನು ಸಿಂಪಡಿಸುವ ಯೋಚನೆಯಲ್ಲಿದರು.ಜೋರು ಮಳೆ ಇದ್ದ ಕಾರಣ ಔಷಧೀಯ ಜೊತೆಗೆ ಅಂಟು ದ್ರವಣ ಮಿಶ್ರಣ ಮಾಡಿ ಸಿಂಪಡಿಸುವ ಮುಂದಾದ ವೈ.ಕೆ ಸುಬ್ಬೆಗೌಡರು ಹೊರಗಿನಿಂದ ಬಂದ ಕೂಲಿ ಕಾರ್ಮಿಕರಿಗೆ ಗುತ್ತಿಗೆಯನ್ನು ನೀಡಲಾಗಿತ್ತು.
ಕೂಲಿ ಕಾರ್ಮಿಕರಿಗೆ ಒಂದೇ ಕೊಠಡಿಯಲ್ಲಿ ಅಂಟು ದ್ರವದ ಹಾಗೂ ಕಳೆ ನಾಶಕವನ್ನು ಇಟ್ಟಿದ್ದು ಸರಿಯಾಗಿ ತಿಳಿಯದೆ ಅಂಟು ದ್ರವಣದ ಬದಲು ಕಳೆನಾಶಕವನ್ನು ಸೇರಿಸಿ ಕಾಫಿ ಗಿಡಕ್ಕೆ ಔಷಧಿಯನ್ನು ಸಿಂಪಡಿಸಲಾಗಿದೆ.
ಇದರಿಂದ ಫಸಲಿಗೆ ಬಂದ ಸುಮಾರು 6 ಲಕ್ಷದ ಕಾಫಿ ಹಾಗೂ ರೋಬಸ್ಟ ಕಾಫಿ ಗಿಡ ಸಂಪೂರ್ಣ ನಾಶವಾಗಿದೆ. ಇಂದು ನಾಶವಾದ ಕಾಫಿ ತೋಟಕ್ಕೆ ವಲಳಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಲೀಕರಾದ ವೈ.ಕೆ ಸುಬ್ಬೇಗೌಡ ಅವರಿಗೆ ಸಮಾಧಾನ ಹೇಳುವುದರೊಂದಿಗೆ, ಕಾಫಿ ಮಂಡಳಿಯ ಅಧಿಕಾರಿ ಜೊತೆ ಮಾತನಾಡಿ ಮುಂದಿನ ಕ್ರಮಕ್ಕೆ ವಿಜ್ಞಾನಿಗಳಿಂದ ಕೈಗೊಳ್ಳಬೇಕಾದ ಸೂಕ್ತ ಕ್ರಮವನ್ನು ಕೇಳಿ ಅದನ್ನು ಮಾಲೀಕರಿಗೆ ತಿಳಿಸುವುದರೊಂದಿಗೆ ಔಷಧಿಯ ವೆಚ್ಚವನ್ನು ವಳಲಹಳ್ಳಿ ಬೆಳೆಗಾರರ ಸಂಘದವರು ಬರಿಸುವುದಾಗಿ ಹೆಚ್. ಡಿ.ಪಿ. ಎ ಮಾಜಿ ಸಂಘಟನಾ ಕಾರ್ಯದರ್ಶಿ ಕೆ. ಪಿ.ಕೃಷ್ಣೆಗೌಡ ಹಾಗೂ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಖಜಾಂಜಿ ಹಿರದನಹಳ್ಳಿ ಹೂವಣ್ಣ ಗೌಡ ಭರವಸೆ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಂ. ಕೆ.ದರ್ಶನ್, ಗೌರವ ಅಧ್ಯಕ್ಷರಾದ ವಿ. ಬಿ ರಮೇಶ್, ಕಾರ್ಯದರ್ಶಿ ಅರುಣ್ ಗೌಡ, ನಿರ್ದೇಶಕರಾದ ವಸಂತ್ ಬೊಮ್ಮನಕೆರೆ ಹಾಗೂ ಚೀರಿ ಕಿರಣ್, ಆದರ್ಶ ಉಪಸ್ಥಿತರಿದ್ದರು.
