ಸಕಲೇಶಪುರ : ತಾಲೂಕಿನ ಬಾಳುಪೇಟೆ ಗ್ರಾಮದಲ್ಲಿ ಇರುವಂತ ಸುಪ್ರಿಯಾ ವೈನ್ಸ್ ನಲ್ಲಿ MRP- ಹಣ ಪಡೆಯುವ ಬದಲು ಹೆಚ್ಚು ಹಣ ಮುಂದಾಗಿರುವುದು ಇದೇನು ಹೊಸದಲ್ಲ ಆದರು ಒಂದು ವಸ್ತುವಿನ ಮೇಲೆ 20-30 ಹೆಚ್ಚು ಹಣ ಪಡೆಯುತ್ತಾರೆ ಆದರೆ ಇಲ್ಲಿ ಒಂದು ವಸ್ತುವಿನ ಮೇಲೆ 100_250 ರೂ ವಸೂಲಿ ಮಾಡುತ್ತಿರುವುದು ಖಂಡನಿಯ.

ಈ ರೀತಿ ಅತೀ ಹೆಚ್ಚು ಹಣ ವಸೂಲಿ ಮಾಡಿದರೆ ದಿನ ನಿತ್ಯ ಮದ್ಯಪಾನ ಮಾಡುವ ಕೆಲ ವ್ಯಕ್ತಿಗಳಿಗೆ ಎಷ್ಟು ಹಣ ನಷ್ಟ ಆಗುತ್ತಿದೆ ಎಂದು ಮದ್ಯ ಪ್ರಿಯಾರೊಬ್ಬರೂ ಮದ್ಯ ಖರೀದಿ ಮಾಡಿ ಆ ವಸ್ತುವಿನ ಬಿಲ್ ಪಡೆದು ಸತ್ಯ ಹೊರಗಡೆ ಬರುವಂತೆ ಮಾಡಿದ್ದಾರೆ.
ಈ ಘಟನೆ ನಡೆದ ತಕ್ಷಣ ಪತ್ರಿಕೆಗೆ ದೂರು ನೀಡಿ ಈ ರೀತಿ ಘಟನೆ ಮತ್ತ್ತೇ ಮಾರುಕಲಿಸದೇ ನನಗೆ ಆದ ಅನ್ಯಾಯ ಮತ್ತೇ ಇನ್ನ್ಯಾರಿಗೂ ಆಗದೇ ಇರೋ ಹಾಗೇ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಮಾನ್ಯ ಶಾಸಕರೇ ಒಮ್ಮೆ ಇತ್ತ ಕಡೇ ಗಮನ ಹರಿಸಿ ದಿನ ನಿತ್ಯ ಈ ರೀತಿ ಒಂದಕ್ಕೆ ಎರಡು ಪಟ್ಟು ಹಣ ವಸೂಲಿ ಮಾಡಲು ಮುಂದಾಗಿರುವ ಸುಪ್ರಿಯಾ ವೈನ್ ಪರವಾನಗಿ ರದ್ದು ಪಡಿಸಬೇಕಾಗಿದೆ.
ಅಬಕಾರಿ ಇಲಾಖೆ ಇದ್ದು ಇಲ್ಲದಂತಾಗಿದೆ ಪ್ರತಿ ಹಳ್ಳಿ ಹಳ್ಳಿಯಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ ಆದರು ಯಾವುದೇ ಕ್ರಮ ತೆಗೆದುಕೊಳ್ಳಲ್ಲ. ಅಧಿಕಾರಿಗಳು ಮೌನ ಆದರೆ ಸಾರ್ವಜನಿಕ ಜೇಬಿಗೆ ಕತ್ತರಿ ಬೀಳುತ್ತಿರುವುದು ಹೆಚ್ಚಾಗುತ್ತದೆ. ಆದ್ದರಿಂದ ಕೂಡಲೇ ಬಾಳುಪೇಟೆ ಸುಪ್ರಿಯಾ ವೈನ್ ನಲ್ಲಿ ಒಂದಕ್ಕೆ 100 -250ರೂ ಪಡೆದಿರುವ ವ್ಯವಸ್ಥೆ ಬಗ್ಗೆ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ.



