
ಹಾಸನ : ಜವನಹಳ್ಳಿ ಮಠದಲ್ಲಿ ದಿನಾಂಕ 15-6-2025 ರಂದು ಜವನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ರವರ ಸಾನಿಧ್ಯದಲ್ಲಿ ಇತ್ತೀಚಿಗೆ ಮೃತರಾದ. ಶ್ರೀ ಜವನಹಳ್ಳಿ ಮಠದ ಭಕ್ತರು, ಹಾಗೂ ಮಠದ ಹೀತರಕ್ಷಣಾ ಸಮೀತಿಯ ನಿರ್ಧೇಶಕರಾದ ದಿವಂಗತ ನೀಲಕಂಠ ( ಪುಟ್ಟಿ) ರವರ ಅಕಾಲಿಕ ನಿಧನಕ್ಕೆ ಜವನಹಳ್ಳಿ ಮಠದ ಹಿತರಕ್ಷಣಾ ಸಮೀತಿ ವತಿಯಿಂದ ನಡೆದ ಸಂತಾಪ ಸೂಚಕ ಸಭೆಯಲ್ಲಿ ಎರಡು ನಿಮೀಷ ಮೌನ ಆಚರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀ ಜವನಹಳ್ಳಿ ಮಠದ ಹೀತರಕ್ಷಣಾ ಸಮಿತಿಯ ಅಧ್ಯಕ್ಷರಾದ ಬಿ ವಿ ಉಮೇಶ್, ಉಪಾಧ್ಯಕ್ಷರಾದ ಕಿರಣ್ ಕುಮಾರ್ ಹೊಸಮನಿ, ಕಾರ್ಯದರ್ಶಿ ಪರಮಶಿವಯ್ಯ, ಸಹಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ನಿರ್ಧೇಶಕರಾದ ಮಂಜುನಾಥ್, ಶೇಖರ್, ಸಂಪತ್ ಕುಮಾರ್, ಹಾಗೂ ಬೇಂದ್ರೆ ಕುಮಾರ್, ಮತ್ತಿತರು ಭಾಗವಹಿಸಿದ್ದರು.
