ಸಕಲೇಶಪುರ : ತಾಲೂಕಿನ ಗುಡ್ಡೆಬೆಟ್ಟ ಗ್ರಾಮದಬಳಿಯ ಎಬಿಸಿ ಎಸ್ಟೇಟ್‌ನಲ್ಲಿ ಶನಿವಾರ ರಾತ್ರಿ ಎರಡು ಕಾಡಾನೆಗಳು ವಿದ್ಯುತ್‌ ಶಾಕ್‌ಗೆ ಬಲಿಯಾಗಿರುವ ದಾರುಣ ಘಟನೆ ನಡೆದಿದೆ.

ತಾಯಿ ಆನೆಯೊಂದಿಗೆ ಸಂಚರಿಸುತ್ತಿದ್ದ ಮರಿಯಾನೆ ತಾಯಿಯೊಂದಿಗೆ ತಾನೂ ಪ್ರಾಣ ಕಳೆದುಕೊಂಡು ಬಿದ್ದಿದೆ.

ಗಾಳಿ-ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದ ಕಾರಣ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಆಹಾರ ಅರಸಿ ಕಾಫಿ ತೋಟದೊಳಗೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *