ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಗ್ರೀಮ್‌ಲೈನರ್ ವಿಮಾನ AI-315ವು ಇಂದು ಬೆಳಗ್ಗೆ ಹಾಂಗ್ ಕಾಂಗ್ ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಆಕಾಶದಿಂದಲೇ ವಾಪಸ್‌ ಏ‌ರ್ ಪೋರ್ಟ್‌ಗೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಹಾಂಗ್ ಕಾಂಗ್ ವಿಮಾನ ನಿಲ್ದಾಣದಿಂದ ಭಾರತದ ರಾಜಧಾನಿ ದೆಹಲಿಗೆ ಏರ್ ಇಂಡಿಯಾ ಬೋಯಿಂಗ್ 787 ಗ್ರೀಮ್‌ಲೈನರ್ ವಿಮಾನ AI-315 ವು ಇಂದು ಬೆಳಗ್ಗೆ ಹೊರಟಿತ್ತು. ವಿಮಾನವೂ ಟೇಕ್ ಆಫ್ ಆದ ಒಂದೂವರೆ ಗಂಟೆ ನಂತರ ಅಂದರೆ 90 ನಿಮಿಷಗಳ ನಂತರ ವಿಮಾನದಲ್ಲಿ ಸಂಭಾವ್ಯ ತಾಂತ್ರಿಕ ದೋಷವನ್ನು ಪೈಲಟ್‌ಗಳು ಹಾಗೂ ಸಿಬ್ಬಂದಿ ಗುರುತಿಸಿದ್ದಾರೆ ಎಂದು ಹೇಳಲಾಗಿದೆ.

ಹೀಗಾಗಿಯೇ ದೆಹಲಿಗೆ ಬರುತ್ತಿದ್ದ ವಿಮಾನ ಆಗಸದಿಂದಲೇ ಹಾಂಗ್ ಕಾಂಗ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ. ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಪೈಲಟ್ ಫೋನ್ ಮಾಡಿ ನಾವು ಇನ್ನು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿದೆ.ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು ಯಾವುದೇ ತೊಂದರೆ ಆಗಿಲ್ಲ. ಲ್ಯಾಂಡಿಂಗ್ ವೇಳೆಯೂ ವಿಮಾನ ಸುರಕ್ಷಿತವಾಗಿದ್ದು ಸಮಸ್ಯೆ ಕಾಣಿಸಿಲ್ಲ. ಸದ್ಯ ಇನ್ನೂ AI-315 ವಿಮಾನವನ್ನು ತಾಂತ್ರಿಕ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಜೂನ್ 12 ರಂದು ಅಹಮದಾಬಾದ್‌ನ ಸರ್ದಾ‌ರ್ ವಲ್ಲಭಭಾಯ್ ಪಟೇಲ್‌ ಏರ್‌ಪೋರ್ಟ್‌ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು.ವಿಮಾನದಲ್ಲಿದ್ದ 242 ಪ್ರಯಾಣಿಕರು ಹಾಗೂ ಎಂಬಿಬಿಎಸ್‌ ಹಾಸ್ಟೆಲ್‌ನಲ್ಲಿದ್ದ 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಥಳದಲ್ಲೇ ಉಸಿರು ಚೆಲ್ಲಿದ್ದರು. ಇದರ ಬೆನ್ನಲ್ಲೇ ಜಾಗೃತಿ ತೆಗೆದುಕೊಂಡ ಏರ್ ಇಂಡಿಯಾ ಪೈಲಟ್ ದೊಡ್ಡ ಅನಾಹುತದಿಂದ ಪಾರು ಮಾಡಿದ್ದಾರೆ ಎನ್ನಲಾಗಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *