
ಹೆತ್ತೂರು : ದಿನಾಂಕ 21/06/2025 ಬೆಳಗ್ಗೆ 9 30 ಗಂಟೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕರಿಡಿಗಾಲ ಹರೀಶ್ ರವರು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಅಭ್ಯಾಸ ಮಾಡಿಸಿ ಯೋಗದ ಮಹತ್ವದ ಬಗ್ಗೆ ವಿವರಿಸಿ ಯೋಗದಿಂದ ರೋಗ ಮುಕ್ತಿ ಎಂದು ಮಕ್ಕಳಿಗೆ ದಿನ ನಿತ್ಯ ಚಟುವಟಿಕೆಗಳ ಜೊತೆಗೆ ಯೋಗ ಅಭ್ಯಾಸ ಮಾಡಿದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಹಾಗೂ ಪ್ರೌಢ ಶಾಲಾ ವಿಭಾಗದಿಂದ ಹರೀಶ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗೌರವಾನ್ವಿತ ಎಸ್.ಡಿಎಂ.ಸಿ ಅಧ್ಯಕ್ಷರಾದ ಸಚಿನ್ ಪ್ರೌಢ ಶಾಲಾ ವಿಭಾಗ ದ ಉಪಪ್ರಾ ನ್ಸುಪಾಲರಾದ ಭಾಸ್ಕರ್ ಸರ್ ಹಾಗೂ ಪ್ರಾಥಮಿಕ ಶಾಲಾ ಮುಕ್ಯೋಪಾಧ್ಯಾಯರಾದ ಸತೀಶ್ ಸರ್ ಮತ್ತು ಸರ್ವ ಸದಸ್ಯರು, ವಾಹನ ಮಾಲೀಕರು,ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಕಾರ್ಯಕ್ರಮದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





