
ಹಾಸನ : ದಿನಾಂಕ 21 ಜೂನ್ 2025 ಶನಿವಾರದಂದು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜಿನ ನಿರ್ದೇಶಕರಾದ ಶ್ರೀ ಡಾ.ಪಾರ್ಥ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಯೋಗದಿಂದ ಆರೋಗ್ಯ ಹಾಗೂ ಉತ್ತಮ ಮನಸ್ಥಿತಿಯನ್ನು ಹೊಂದಬಹುದು ದಿನನಿತ್ಯ ಯೋಗಾಭ್ಯಾಸವು ನಮ್ಮ ದೈನಂದಿನ ಚಟುವಟಿಕೆಗೆ ಅನುಕೂಲ ಎಂದು ತಿಳಿಸಿದರು.
ಪದವಿ ವಿಭಾಗದ ಪ್ರಾಂಶುಪಾಲರಾದ ಶ್ರೀ ಬಿ. ಎನ್ ಅರುಣ್ ಕುಮಾರ್ ಅವರು ಯೋಗ ಆರಂಭವಾದದ್ದು ಹಾಗೂ ಭಾರತದಲ್ಲಿ ಯೋಗಕ್ಕಿರುವ ಮಹತ್ವದ ಬಗ್ಗೆ ತಿಳಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ನೀರಜಾ ರವರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟು ಅದರ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರಾದ ಅನಂತೇಶ್, ಆಶಾ , ದೈಹಿಕ ಶಿಕ್ಷಣ ನಿರ್ದೇಶಕರಾದ ಲೋಕೇಶ್ ಅವರು ಪ್ರಕಾಶ್ ರವರು ಹಾಗೂ ಎಲ್ಲಾ ವಿಭಾಗದ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



