
ಸಕಲೇಶಪುರ:- ಸಕಲೇಶಪುರ ತಾಲ್ಲೂಕು ಕುರಭತ್ತೂರು ಗ್ರಾಮಪಂಚಾಯಿತಿಯ ಶುಕ್ರವಾರ ಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಇಂದು ಬೆಳಗ್ಗೆ ಶಾಲೆಯ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ಶಿಕ್ಷಕರು ತಿಳಿಸಿ ಕೊಟ್ಟರು.ನಂತರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗಾಸನವನ್ನು ಮಾಡುವ ಮೂಲಕ ಅರ್ಥಪೂರ್ಣ ಯೋಗ ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪ್ರತಾಪ್, ಸಹ ಶಿಕ್ಷಕರಾದ ಜೀವನ್,ಹಾಗೂ ಶಾಲೆಯ ಸಹ ಶಿಕ್ಷಕರು,ಆಡಳಿತ ವರ್ಗದವರು ಉಪಸ್ಥಿತರಿದ್ದರು.




