
ಸಕಲೇಶಪುರ : -ತಾಲ್ಲೂಕಿನ ಹೆತ್ತೂರು ಹೋಬಳಿಯ ಬೊಮ್ಮನಕೆರೆ,ಕರಡಿಗಾಲ,ವಳಲಹಳ್ಳಿ,ಹಿರಿಯೂರು ಗ್ರಾಮಸ್ಥರಿಗೆ ಸಕಲೇಶಪುರದಿಂದ ಮಧ್ಯಾನ 2 ಗಂಟೆಗೆ ಹೊರಡುವ ಕಾಗಿನಹರೆ ಬಸ್ಸನ್ನು ಸಕಲೇಶಪುರ,ಕ್ಯಾನಹಳ್ಳಿ,ಶುಕ್ರವಾರಸಂತೆ,ವಡ್ಡರಹಳ್ಳಿ, ಬೊಮ್ಮನಕೆರೆ,ಕರಡಿಗಾಲ,ವಳಲಹಳ್ಳಿ,ಹಿರಿಯೂರು ಕೂಡಿಗೆ ಮಾರ್ಗವಾಗಿ ಮಾರ್ಗ ಬದಲಾವಣೆ ಮಾಡಿದರೆ ಈ ಭಾಗದ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ,ಗ್ರಾಮಸ್ಥರಿಗೆ, ರೋಗಿಗಳಿಗೆ,ವೃದ್ಧರಿಗೆ , ಸರ್ಕಾರಿ ಶಾಲೆಯ ಶಿಕ್ಷಕರಿಗೆ ಅನುಕೂಲವಾಗುತ್ತದೆ. ಆದುದರಿಂದ ಈ ಬಸ್ ಮಾರ್ಗವನ್ನು ಬದಲಾವಣೆ ಮಾಡಿಕೊಡಬೇಕೆಂದು ಶಾಸಕರಾದ ಸಿಮೆಂಟ್ ಮಂಜು ಅವರ ಶಿಫಾರಸಿನ ಪತ್ರದೊಂದಿಗೆ ಗ್ರಾಮಸ್ಥರು, ಸಕಲೇಶಪುರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಯವರು ಇಂದು ಸಕಲೇಶಪುರ ಕೆಎಸ್ಆರ್‌ಟಿಸಿ ಘಟಕದ ವ್ಯವಸ್ಥಾಪಕರಾದ ಪುಟ್ಟಸ್ವಾಮಿಯವರಿಗೆ ಮನವಿ ಪತ್ರ ಕೊಡಲಾಯಿತಿ.
ಈ ಸಂದರ್ಭದಲ್ಲಿ ಹರೀಶ್ ಕರಡಿಗಾಲ, ಹೆತ್ತೂರು ಹೋಬಳಿಯ ವಕ್ಕಲಿಗರ ಸಂಘದ ನಿರ್ದೇಶಕರಾದ ಚಿದಾನಂದ್ (ಮದನ್) , ನಾಗೇಶ್ ವಳಲಹಳ್ಳಿ, ಗ್ರಾಮಭಿರುದ್ಧಿ ಸದಸ್ಯರಾದ ಕೆ. ಡಿ ಲತೇಶ್, ಸಕಲೇಶಪುರ ನಗರ ಕರವೇ ಅಧ್ಯಕ್ಷರಾದ ಹೇಮಂತ್ ಗೌಡ, ತಾಲ್ಲೂಕು ಕರವೇ ರೈತ ಘಟಕದ ಅಧ್ಯಕ್ಷರಾದ ವಸಂತ್ ಬೊಮ್ಮನಕೆರೆ, ಕಸಬಾ ಕರವೇ ಅಧ್ಯಕ್ಷರಾದ ಸಿದ್ದಂತ್ ಪಟೇಲ್, ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಕಾರ್ಯದರ್ಶಿ ಅರುಣ್ ಗೌಡ ಕರಡಿಗಾಲ ಇದ್ದರು.
