
ಸಕಲೇಶಪುರ :- ಹೆತ್ತೂರು ಹೋಬಳಿಯ 35 ಹಳ್ಳಿಗಳಿದ್ದು ಸುಮಾರು ಐದು ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ರೈತರು ಕೃಷಿಗೆ ಪೂರಕವಾದ ಹೈನುಗಾರಿಕೆಯನ್ನು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಈ ಹೋಬಳಿಯ ಪಶು ಆಸ್ಪತ್ರೆಯಲ್ಲಿ ಕಳೆದ ಐದು ತಿಂಗಳಿಂದ ಪಶು ವೈದ್ಯರಿಲ್ಲದೆ ರೈತರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ಹೋಬಳಿಯ ಪಸು ವೈದ್ಯ ಆಸ್ಪತ್ರೆಗೆ ವೈದ್ಯರನ್ನು ನೇಮಿಸಿ ರೈತರ ಹೈನುಗಾರಿಕೆಗೆ ಅನುಕೂಲ ಮಾಡಿಕೊಡಬೇಕಾಗಿ, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷರಾದ ಆದ ದೀಪಕ್ ಗೌಡ ಹೆತ್ತೂರು ಒತ್ತಾಯಿಸಿದ್ದಾರೆ.
ರೈತರು ಜಾನುವಾರುಗಳು,ನಾಯಿ, ಹಂದಿ, ಕುರಿ ಅಂತ ಹೈನುಗಾರಿಕೆಗೆ ಪೂರಕವಾದ ಪ್ರಾಣಿಗಳನ್ನು ಸಾಕುತ್ತಿದ್ದಾರೆ , ಇವುಗಳಿಗೆ ಏನಾದರೂ ಚರ್ಮರೋಗ , ಗಂಟು ಬಾದೆ ಸರಿಯಾದ ಚಿಕಿತ್ಸೆ ಸಿಗದೆ ಸಮಸ್ಯೆಯಾಗುತ್ತಿದೆ . ಅಲ್ಲದೆ ಜಾನುವಾರುಗಳು ಗರ್ಭಧಾರಣೆ ಸಮಯದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಹಿಡಿದುಕೊಂಡು ಬೇರೆ ದೂರದ ಆಸ್ಪತ್ರೆಗೆ ಅಲಿಯುವಂತ ಪರಿಸ್ಥಿತಿಯಾಗಿದೆ.ಎಂದು ಹೆತ್ತೂರು ಹೋಬಳಿ ಘಟಕದ ರೈತ ಘಟಕದ ಹೋಬಳಿ ಅಧ್ಯಕ್ಷರಾದ ಕವನಗೌಡ ದುರಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುವ ಹೆತ್ತೂರಿನ ಪಶು ಆಸ್ಪತ್ರೆಗೆ ಕೂಡಲೇ ಪಶು ವೈದ್ಯರನ್ನು ನೇಮಕ ಮಾಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ತಾಲ್ಲೂಕು ಪಶು ಆಸ್ಪತ್ರೆಯ ಮುಂದೆ ಸಕಲೇಶಪುರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಹೆತ್ತೂರು ಹೋಬಳಿಯ ರೈತರ ವತಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ.ಎಂದು ತಾಲ್ಲೂಕು ಕರವೇ ರೈತ ಘಟಕದ ಅಧ್ಯಕ್ಷರಾದ ಬೊಮ್ಮನಕೆರೆ ವಸಂತ ಎಚ್ಚರಿಕೆ ನೀಡಿದ್ದಾರೆ.
