
ಸಕಲೇಶಪುರ : ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಬದಿ ಇರುವ ಮರಗಳ ನಿರ್ವಹಣೆ ಯಾರದು.? ಕೊಲ್ಲಹಳ್ಳಿ NH 75 ರ ಜಂಕ್ಷನ್ ನಿಂದ ತೋಟದಗದ್ದೆ ವರೆಗೆ ನಗರದ ಮಧ್ಯೆ ಸಾಗಿರುವ ಹೆದ್ದಾರಿಯ ಕೆಲವು ಸಾಲು ಮರಗಳ ಕೊಂಬೆಗಳು ಒಣಗಿ ಶಿಥಿಲವಾಗಿವೆ.
PWD ಕಛೇರಿ ಬಳಿ .ಉರ್ದು ಶಾಲೆಯ ಬಳಿ. ಲಯನ್ಸ್ ಕ್ಲಬ್, K EB ಕಛೇರಿ ಮುಂಭಾಗ ಹಾಗೂ APMC ಸಂಕೀರ್ಣದ ಬಳಿ ಹಲವಾರು ಮರಗಳ ಕೊಂಬೆಗಳು ಒಣಗಿ ನಿಂತಿದ್ದು ಯಾವುದೇ ಸಂಧರ್ಭದಲ್ಲಿ ಪಾರಚಾರಿಗಳ/ವಾಹನ ಸವಾರರ ಮೇಲೆ ಬೀಳುವ ಸಂಭವ ಇರುತ್ತದೆ.
ಹೊಸ ಬಸ್ ನಿಲ್ದಾಣದಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು. ಕಾರ್ಯನಿಮಿತ್ತ KEB ಹಾಗೂ ಪತ್ರಕರ್ತರ ಭವನದ ಕಡೆಗೆ ಬರುವ ಸಾರ್ವಜನಿಕರು, ಆಸ್ಪತ್ರೆಗೆ ತೆರಳುವ ರೋಗಿಗಳು ಇದೇ ಮಾರ್ಗ ಬಳಸುತ್ತಾರೆ.ಕರವೇ (ಪ್ರವೀಣ್ ಶೆಟ್ಟಿ ಬಣ) ಈ ಕುರಿತು ರಾಹೆ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಮರಗಳ ನಿರ್ವಹಣೆ ಸ್ಥಳೀಯ ಆಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿರುತ್ತಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಮರಗಳ ಕೊಂಬೆಗಳ ತೆರವಿಗೆ ತಮ್ಮಲ್ಲಿ ಸಂಪನ್ಮೂಲದ ಕೊರತೆ ಇರುವುದಾಗಿ ಅಸಹಾಯಕತೆ ವ್ಯಕ್ತಪಡಿಸಿರುತ್ತಾರೆ.ಮಾನ್ಯ ತಹಸಿಲ್ದಾರ್ ರವರನ್ನು ಸಂಪರ್ಕಿಸಿದಾಗ “ತಾಲ್ಲೂಕು ವಿಪತ್ತು ನಿರ್ವಹಣಾ ನಿಧಿ”ಯನ್ನು ಬಳಸಲು ಅವಕಾಶ ಇದೆಯೇ? ಎಂದು ಪರಿಶೀಲಿಸುವುದಾಗಿ ಉತ್ತರಿಸಿರುತ್ತಾರೆ.
ಮಲೆನಾಡಿನ ಗಾಳಿ ಮಳೆಗೆ ಈ ಕೊಂಬೆಗಳು ಬಿದ್ದು ಅಮಾಯಕರ ಪ್ರಾಣಹಾನಿಯಾಗುವ ಮೊದಲು ಈ ಬಗ್ಗೆ ತುರ್ತಾಗಿ ಗಮನಹರಿಸಿ ಮುಂಜಾಗರೂಕತಾ ಕ್ರಮವಾಗಿ ಅಪಾಯಕಾರಿ ಸ್ಥಿತಿಯಲ್ಲಿರುವ ಕೊಂಬೆಗಳನ್ನು ತೆರವು ಮಾಡಬೇಕೆಂದು ಕರವೇ ಒತ್ತಾಯಿಸಿದ್ದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
