ಬೇಲೂರು : ತಾಲೂಕಿನ ಕೋಗಿಲೆಮನೆ ಗ್ರಾಪಂ ಈ ಹಿಂದೆ ಇದ್ದ ಅದ್ಯಕ್ಷರಾಗಿದ್ದ ಶಿವಕುಮಾರ್ ಅವರು ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಬುಧವಾರ ಚುನಾವಣೆ ಘೋಷಣೆಯಾಗಿತ್ತು.೮ ಜನ ಸದಸ್ಯರ ಬಲವಿರುವ ಗ್ರಾಪಂಯಲ್ಲಿ ಹಾಡ್ಲಗೆರೆ ಗ್ರಾಮದ ಶಿವವೀರಪ್ಪ ಸಂಗಪ್ಪ ನಾಮ ಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧವಾಗಿ ಅವರು ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಶಿಲ್ದಾರ್ ಎಂ ಮಮತಾ ಘೋಷಣೆ ಮಾಡಿದರು.ನಂತರ ನೂತನ ಅದ್ಯಕ್ಷರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾದ್ಯಕ್ಷೆ ಹೇಮಾವತಿ, ಸದಸ್ಯ ಶಿವಕುಮಾರ್,ಪುಟ್ಟಸ್ವಾಮಿ,ಸಾವಿತ್ರಿ, ಮಹೆದೇವಮ್ಮ,ಸುಶೀಲ,ಪಿಡಿಒ ಚಿದಾನಂದ್ ,ಬಿಜೆಪಿ ಮಂಡಲದ ಅದ್ಯಕ್ಷ ಸಂಜು ಕೌರಿ ಗ್ರಾಮಸ್ಥರು ಹಾಗು ಕರವೇ ಪ್ರವಿಣ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *