
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿಯ ದೇವಲಕೆರೆಯಲ್ಲಿ ಬಾರಿ ಮಳೆಯಿಂದಾಗಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಎರಡರಿಂದ ಮೂರು ಕಂಬ ಮುರಿದು ಬಿದ್ದಿದ್ದು, ಇದನ್ನು ಗಮನಿಸಿದ ತಕ್ಷಣ ವಿದ್ಯುತ್ ಲೈನ್ ಮ್ಯಾನ್ ನವರಿಗೆ ಕರೆ ಮಾಡಿ ತಿಳಿಸಲಾಯಿತು.
ರಸ್ತೆ ಯಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬವನ್ನು ಎತ್ತಲು ಸಹಾಯ ಮಾಡಲಾಯಿತು. ಮತ್ತು ಅದೇ ರಸ್ತೆಯಲ್ಲಿ KSRTC ಬಸ್ ಚರಂಡಿ ಒಳಗೆ ಸಿಕ್ಕಿಹಾಕಿಕೊಂಡಿತ್ತು ಅದನ್ನು ಎತ್ತಲು ಸಹಾಯ ಮಾಡಿದ ಹೆಗ್ಗದ್ದೆ ವಲಯ ದೇವಲಕೆರೆ ಘಟಕದ ಶೌರ್ಯ ವಿಪತ್ತು ತಂಡ.
ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರಾದ ಪ್ರಸನ್ನ ಕುಮಾರ್ ಮತ್ತು ನಿಖಿಲ್ ಅಕ್ಷಯ್ ಗಿರೀಶ್ ಸುನಿಲ್ ಮತ್ತು ಗ್ರಾಮಸ್ಥರಾದ ಅಶೋಕ್ , ನವೀನ್ ಕಿತ್ತಳೆ ಮನೆ ರಮೇಶ್ ಆಚಾರ್ಯರ ಇದ್ದರು.




