.ಸಕಲೇಶಪುರ :- ತಾಲ್ಲೂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಗನ್ ಹಾಡ್ಲಹಳ್ಳಿ ಅವರು ತಾಲ್ಲೂಕಿನ ಪ್ರತಿ ಹೋಬಳಿಯಲ್ಲಿ ಸಂಘದ ಘಟಕವನ್ನು ತೆರೆಯುವ ಮೂಲಕ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯ ಮಗ್ನರಾಗಿದ್ದಾರೆ.

ಮಂಗಳವಾರ ಬೆಳಗೋಡು ಹೋಬಳಿಯ ಘಟಕದ ರಚನೆ ಮಾಡಿದ್ದು ಬೆಳಗೋಡು ಪಂಚಾಯಿತಿ ಘಟಕದ ನೂತನ ಅಧ್ಯಕ್ಷರಾಗಿ ರವೀಶ್,ಕಾರ್ಯದರ್ಶಿ ದೃಶಾಂತ್, ಹಾಗೂ ಉದಯವಾರ ಘಟಕದ ನೂತನ ಮಂಜುನಾಥ್,ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕುಮಾರ್,ಉಪಾಧ್ಯಕ್ಷರಾಗಿ ಕುಮಾರ್, ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರು ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಹೆಚ್‌.ಕೆ. ಸುಮನ್ ಹೆತ್ತೂರು, ಸುನಿಲ್ ಹಾಡ್ಲಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಜಯಕುಮಾರ್, ತಾಲೂಕು ರೈತ ಘಟಕದ ಅಧ್ಯಕ್ಷರಾದ ವಸಂತ್ ಬೊಮ್ಮನಕೆರೆ, ರೈತ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದಿಲೀಪ್ ಕೆಸಗುಲಿ,ತಾಲೂಕು ಸಂಚಾಲಕರಾದ ಹಸೇನಾರ್ ಆನೆ ಮಾಲ್, ಹೆತ್ತೂರು ಹೋಬಳಿ ಅಧ್ಯಕ್ಷರಾದ ದೀಪಕ್, ದಶಾಂತ್, ಹಾಗೂ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *