
ಸಕಲೇಶಪುರ : ತಾಲ್ಲೂಕಿನ ಮಠಸಾಗರ ಗ್ರಾಮಕ್ಕೆ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಮಾರುತಿ 800 ಕಾರಿನಲ್ಲಿ ಸರಿಸುಮಾರು ಮೂರು ಪ್ಲಾಸ್ಟಿಕ್ ಚೀಲದಲ್ಲಿ ಗೋಮಾಂಸ ತುಂಬಿ ಸಾಗಾಟ ಮಾಡುತ್ತಿದ್ದಾಗ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪೋಲಿಸರು ದಾಳಿ ನಡೆಸಿದ್ದಾರೆ.
MARUTI 800 ಕಾರಿನಲ್ಲಿ ಗುರುವಾರ ಬೆಳಗ್ಗೆ 08:30 ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬರುತ್ತಿದ್ದ ಕಾರನ್ನು ಹಿಂಬಾಲಿಸಿರುವ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಕೊಲ್ಲಹಳ್ಳಿ ಭಾಗದಲ್ಲಿ ಕಾರು ಮಠಸಾಗರ ಕಡೆ ತಿರುಗಿದ್ದು, ಕಾರನ್ನು ಹಿಂಬಾಲಿಸಿ ಮಠಸಾಗರ ಸಮೀಪ ಅನುಮಾನಾಸ್ಪದವಾಗಿ ಕಂಡು ಬರುತ್ತಿದ್ದ ಕಾರನ್ನು ತಡೆದಾಗ ಕಾರಿನಲ್ಲಿದ್ದ ಇಬ್ಬರು ಕಾರನ್ನು ಬಿಟ್ಟು ಓಡಿ ಹೋಗಿದ್ದು ಕಾರನ್ನು ಪರಿಶೀಲಿಸಲಾಗಿ ಕಾರಿನ ಹಿಂಬಾಗದಲ್ಲಿ ಪ್ಯಾಕೆಟ್ ಮಾಡಿಟ್ಟಿದ್ದ ಗೋಮಾಂಸ ಪ್ಯಾಕೆಟ್ ಗೋಣಿ ಚೀಲದಲ್ಲಿ ತುಂಬಿ ಇಟ್ಟಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ತಕ್ಷಣ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




