ಹಾಸನ : ಕೆ.ಎಸ್.ಆರ್.ಟಿ.ಸಿ ತರಬೇತಿ ಕೇಂದ್ರ, ಹಾಸನ. ಮತ್ತು ರೋಟರಿ ಕ್ಲಬ್ ಹಾಸನ್ ಸನ್ ರೈಸ್ ವತಿಯಿಂದ “ಕೆ.ಎಸ್. ಆರ್.ಟಿ.ಸಿ” ನೌಕರರಿಗಾಗಿ ಯೋಗ ಗುರು “ಚೇತನ್ ಗುರೂಜಿರವರಿಂದ “ಯೋಗ ಪ್ರಾಣಯಾಮ ಮತ್ತು ಆರೋಗ್ಯದ ಮಹತ್ವ”ವನ್ನು ತಿಳಿಸಲು ಕಾರ್ಯಗಾರವನ್ನು ಇಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹಾಸನ ನಗರದ ಕೆ.ಎಸ್.ಆರ್.ಟಿ.ಸಿ ತರಭೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಗಾರದಲ್ಲಿ ಸುಮಾರು 80ಕ್ಕೂ ಹೆಚ್ಚು ನೌಕರರು ಭಾಗವಹಿಸಿ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಂಡರು. ಸದರಿ ಕಾರ್ಯಕ್ರಮದಲ್ಲಿ ನೌಕರರ ತರಬೇತಿದಾರರಾದ “ಸಂತೋಷ್ ಸರ್” ರವರು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ಅಧ್ಯಕ್ಷರಾದ ರೋ!! ಎಚ್ ಡಿ ವಜ್ರಕುಮಾರ್ ರವರು,ಕಾರ್ಯದರ್ಶಿ ಕೆ.ಎಸ್ ಯೋಗೇಶ್ ರವರು, ಸದಸ್ಯರಾದ ಕರುಣೇಶ್ ಮತ್ತು ಲೋಕೇಶ್ ರವರುಗಳು ಹಾಜರಿದ್ದರು.

ಇಂತಿ : ಅಧ್ಯಕ್ಷರು,ಕಾರ್ಯದರ್ಶಿ, ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು,* ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಹಾಸನ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *