
ಬೇಲೂರು : ಚೌಡೇಶ್ವರಿ ದೇವಿಗೆ ಆಷಾಢ ಮಾಸದ ಮೊದಲ ಪೂಜೆಪಟ್ಟಣದ ದೇವಾಂಗ ಬೀದಿಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ಆಶಾಡ ಮಾಸದ ವಿಶೇಷ ಪೂಜೆ ನಡೆಸಲಾಯಿತು.
ಆಷಾಢ ಮಾಸವು ದೇವಿಯ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ತಿಂಗಳು. ಈ ಮಾಸದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ.
ಆಷಾಢ ಮಾಸದಲ್ಲಿ ಶ್ರೀ ಚೌಡೇಶ್ವರಿ ಪೂಜೆಯ ಮಹತ್ವ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದು ಕಡಿಮೆ. ಆದರೆ, ಈ ಮಾಸದಲ್ಲಿ ದೇವತೆಗಳಿಗೆ, ವಿಶೇಷವಾಗಿ ಸ್ತ್ರೀ ದೇವತೆಗಳಿಗೆ ಹೆಚ್ಚು ಶಕ್ತಿ ಇರುತ್ತದೆ ಎಂಬ ನಂಬಿಕೆಯಿದೆ. ಆಷಾಢ ಶುಕ್ರವಾರಗಳು ಚಾಮುಂಡಿ (ಚೌಡೇಶ್ವರಿ) ದೇವಿಗೆ ಬಹಳ ವಿಶೇಷವಾದ ದಿನಗಳಾಗಿವೆ. ಈ ದಿನಗಳಲ್ಲಿ ದೇವಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕಗಳನ್ನು ಮಾಡಲಾಗುತ್ತದೆ. ಚೌಡೇಶ್ವರಿ ದೇವಿ ಸ್ತೋತ್ರಪ್ರಿಯಳಾಗಿದ್ದು, ಈ ಸಮಯದಲ್ಲಿ ಸ್ತೋತ್ರಗಳನ್ನು ಪಠಿಸುವುದರಿಂದ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
ಈ ಪೂಜಾ ಕಾರ್ಯಕ್ರಮ ದಲ್ಲಿ ಬಂದಂತ ಭಕ್ತರಿಗೆ ಪ್ರಸಾದ. ವಿನಿಯೋಗ ನೆರವೇರಿತು. ಈ ವೇಳೆ ದೇವಸ್ಥಾನದ ಗೌರವ ಅದ್ಯಕ್ಷ ಗಿರಿಯಪ್ಪಶೆಟ್ಟಿ, ರಂಗನಾಥ್, ಪ್ರಸಾದ್,ದಿನೇಶ್, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.



