
ಸಕಲೇಶಪುರ : ಕಳೆದ 24 ಗಂಟೆಯಲ್ಲಿ ಸಕಲೇಶಪುರದಲ್ಲಿ 2 ಪ್ರತ್ಯೇಕ ಪ್ರಕರಣದಲ್ಲಿ 2000 ಕೆಜಿ 2 ಟನ್ ಗೋಮಾಂಸ ಅಕ್ರಮ ಸಾಗಾಣಿಕೆ ನಡೆದಿರುವುದು ಹಿಂದೂ ಸಮಾಜಕ್ಕೆ ಮತ್ತು ಪೊಲೀಸ್ ಇಲಾಖೆಗೆ ಸವಾಲು ಒಡ್ಡುತ್ತಿರುವ ಕಸಾಯಿಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು DYSP ಪ್ರಮೋದ್ ಕುಮಾರ್ ಜೈನ ಅವರಿಗೆ ಹಿಂದು ಹಿತರಕ್ಷಣೆ ವೇದಿಕೆ ಸಂಘಟನೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ದಿನಾಂಕ 03.07.25 ಕ್ಕೆ ಸಕಲೇಶಪುರ ನಗರದ ಮಠಸಾಗರ ಗ್ರಾಮದಲ್ಲಿ KA 18 N 6475 ಮಾರುತಿ 800 ಕಾರ್ ನಲ್ಲಿ 300 ಕೆಜಿ ಗು ಹೆಚ್ಚು ಗೋಮಾಂಸ ತಂದಿರುತ್ತಾರೆ • ದಿನಾಂಕ 04.07.25 ರಂದು ಬೆಳಗ್ಗಿನ ಜಾವ 3.15 ಕ್ಕೆ ಅಕ್ರಮವಾಗಿ 1700 ಕೆಜಿ ಗೂ ಹೆಚ್ಚು ಗೋಮಾಂಸ KA 44 AA 1868 ಅಶೋಕ್ ಲೈಲ್ಯಾಂಡ ವಾಹನದಲ್ಲಿ ತುಂಬಿಕೊಂಡು ಮಂಗಳೂರು ಕಡೆ ಸಾಗಾಣಿಕೆ ಆಗುತಿತ್ತು.
ಮೇಲ್ಕಂಡ 2 ವಾಹನಗಳು ಜಪ್ತಿಯಾಗಿದೆ ಆದ್ರೆ ಇವರು ಎಲ್ಲಿಂದ ಯಾವ ಕಸಾಯಿಖಾನೆಯಿಂದ ಗೋಮಾಂಸ ತಂದಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು ಮತ್ತು ಅಲ್ಲಿನ ಕಸಾಯಿಖಾನೆ ನಡಿಸುತ್ತಿರುವ ವ್ಯಕ್ತಿಯನ್ನ ಬಂಧಿಸಿ ಅವನ ಮೇಲೆಯೂ ಸಹ FIR ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ
ಕರ್ನಾಟಕ ಜಾನವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ವಿಧೇಯಕ 2020 ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಸಹ ಯಾವುದೇ ಭಯವಿಲ್ಲದೆ ಗೋಹತ್ಯೆ ಮಾಡುತ್ತಿರೋದು ಆತಂಕಕಾರಿ ಬೆಳವಣಿಗೆ ಆಗಿದ್ದು ಕಾನೂನು ಉಲ್ಲಂಘನೆ ಮಾಡುತ್ತಿರುವ ಗೋಮಾಂಸ ಸಾಗಾಣಿಕೆ ಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಪ್ಪಿತಸ್ಥರ ಮೇಲೆ ಗಡಿಪಾರು ಆದೇಶ ಮಾಡಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
8 ಜೂಲೈ ಒಳಗಾಗಿ ಕಸಾಯಿಖಾನೆಗಳನ್ನ ಬಂಧಿಸಿ FIR ದಾಖಲಿಸಿದ್ದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಘು ಸಕಲೇಶಪುರ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ಕೌಶಿಕ್ ಹೆನ್ನಲಿ, ಸುಪ್ರೀತ್ ಭಜರಂಗಿ, ಜತಿನ್ ವಿದ್ಯಾರ್ಥಿ ಪ್ರಮುಖ್, ಹರ್ಷ, ಮೋಹನ್, ಸಂದೀಪ್ ಉಪಸ್ಥಿತಿ ಇದ್ದರು
