ಆಲೂರು : ಅದು ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆ ಮಕ್ಕಳು ಚೆನ್ನಾಗಿ ಓದಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಅಂತ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸ್ತಾರೆ ಆದ್ರೆ ಈ ಶಾಲೆಯ ಪರಿಸ್ಥಿತಿ ನೋಡಿದ್ರೆ ಸರ್ಕಾರಿ ಶಾಲೆ ಅಂದ್ರೆ ಹೀಗಿರುತ್ತಾ ಅಂತ ಒಂದು ಕ್ಷಣ ಬೆಚ್ಚಿ ಬೀಳೋದು ಗ್ಯಾರಂಟಿ ಹಾಗಾದ್ರೆ ಆ ಶಾಲೆ ಯಾವ್ದು ಅಂತೀರಾ ನಾವು ನಿಮಗೆ ತೋರಿಸ್ತೀವಿ ನೋಡಿ..

ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣ ಸಂಸ್ಥೆಗಳು ಮಾದರಿಯಾಗಿರಬೇಕು ಎಲ್ಲಾ ಸೌಲಭ್ಯಗಳನ್ನು ಹೊಂದಿ ಶಿಕ್ಷಣದ ಜೋತೆಗೆ ಸಾಮಾಜಿಕ ನೆಲೆಯನ್ನು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಆದರೆ ಯುವ ಶಕ್ತಿಯನ್ನು ರೂಪಿಸಬೇಕಾದ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೆ ಏನಾಗುತ್ತದೆ ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆ ಮಾತಂತಾಗುತ್ತದೆ ಯುವ ಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಶಾಲೆಯ ರಸ್ತೆ ಕೆಸರುಗದ್ದೆಯಾಗಿದ್ದು ಕೆಸರು ಬಿದ್ದ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುತ್ತಿರುವ ಮಕ್ಕಳ ಪರಿಸ್ಥಿತಿ ಹೇಳತೀರಾದಾಗಿದೆ ಎಲ್ಲೆಂದರಲ್ಲಿ ಮೈದಾನದಲ್ಲಿ ನಿಂತ ನೀರು ಕೆಸರಿನಂತದ ರಸ್ತೆ ಈ ದೃಶ್ಯಾವಳಿ ಕಂಡು ಬಂದಿದ್ದು

ಆಲೂರು ತಾಲ್ಲೂಕಿನ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಕರವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸರ್ಕಾರ ಲಕ್ಷ ಲಕ್ಷ ಅನುದಾನವನ್ನು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಮಿಸಲಿಟ್ಟಿರುತ್ತಾರೆ ಆದರೆ ಹಾ ಅನುದಾನ ಸರ್ಕಾರಿ ಶಾಲೆಗೆ ತಲುಪುತ್ತ ಇದೆಯೋ ಇಲ್ಲವೂ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ

ಈ ಶಾಲೆಯಲ್ಲಿ ರಸ್ತೆ ಸಮಸ್ಯೆಇದ್ದು ನಿತ್ಯ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ ಕಣ್ಣೀರಿಟ್ಟುಕೊಂಡು ಕೈ ಕಾಲುಗಳನ್ನು ಕೆಸರು ಮಾಡಿಕೊಂಡು ಹೋಗಬೇಕಾದ ಸ್ಥಿತಿ ಉಂಟಾಗಿರುವ ಸುದ್ದಿ ನೋಡಿ ಸಂಜೆ tv46 ಕನ್ನಡದಲ್ಲಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *