ಸಕಲೇಶಪುರ : ಪರಿಸರ ದಿನಾಚರಣೆಯ ಅಂಗವಾಗಿ ಇಂದು ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ ಪಟ್ಟಣದ ಗುರುವೇ ಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು

ಈ ಸಂದರ್ಭದಲ್ಲಿಡಿ ವೈ ಎಸ್ ಪಿ ಪ್ರಮೋದ್ ಕುಮಾರ್ ಜೈನ್, ಶಾಸಕರಾದ ಸಿಮೆಂಟ್ ಮಂಜು, ಕೋಗರವಳ್ಳಿ ಸಂತೋಷ್ ರವರು ಮಲೆನಾಡು ವೀರಶೈವ ಸಮಾಜದ ಉಪಾಧ್ಯಕ್ಷರು ಎ ಜೆ ಗಗನ್, ಎಚ್ ಕೆ ಸುರೇಶ್ ಸಹ ಕಾರ್ಯದರ್ಶಿ , ಹಾಗೂ ಸಂಘಟನಾ ಕಾರ್ಯದರ್ಶಿ ಎ ವಿ ನರೇಶ್ ರವರು ,ಯುವ ವೇದಿಕೆ ಅಧ್ಯಕ್ಷರಾದ ಶಶಿಕುಮಾರ್, ಹಾಗೂ ಜಂಬರಡಿ ಲೋಹಿತ್ , ಮತ್ತು ಸಮಾಜದ ಎಲ್ಲಾ ಅಂಗ ಸಂಸ್ಥೆಗಳ ಸದಸ್ಯರುಗಳು ಭಾಗವಹಿಸಿದ್ದರು. ಮತ್ತು ಅಕ್ಕಮಹಾದೇವಿ ಮಹಿಳಾ ವೇದಿಕೆಯ ಹಿರಿಯ ಹಾಗೂ ಕಿರಿಯ ಸದಸ್ಯಣೀಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲರಿಗೂ ಅಕ್ಕಮಹಾ ದೇವಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಕೋಮಲ ದಿನೇಶ್ ಕಾರ್ಯದರ್ಶಿ ಗಾಯತ್ರಿ ಮುರುಗೇಶ್ ,ಖಜಾಂಜಿ ಸುಮ ಸೋಮಶೇಖರ್, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ💐🙏

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *