
ಸಕಲೇಶಪುರ : ಪುರಾತನ ಕಾಲದ ಬೆಟ್ಟದ ಬೈರೇಶ್ವರ ದೇವಸ್ಥಾನವನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಧರ್ಮಸ್ಥಳ ವಿಪತ್ತು ನಿರ್ವಹಣೆ ತಂಡದವರಿಂದ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂದಂತ ಪ್ರವಾಸಿಗರು ದೇವಸ್ಥಾನದ ಆವರಣದ ಒಳಗೆ ಗಲೀಜು ಮಾಡಿ ಮತ್ತು ಚಪ್ಪಲಿಯನ್ನು ದೇವಸ್ಥಾನದ ಆವರಣದ ಒಳಗೆ ಹಾಕಿಕೊಂಡು ರೀಲ್ಸ್ ಮಾಡುವುದು ಮತ್ತು ಫೋಟೋ ತೆಗೆಯುವುದು ಅದೇ ರೀತಿ ದೇವಸ್ಥಾನದ ಗರ್ಭಗುಡಿಯ ಮೇಲೆ ಚಪ್ಪಲಿ ಹಾಕಿಕೊಂಡು ಬರುವರಿಗೆ ಅರಿವು ಮೂಡಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಧರ್ಮಸ್ಥಳ ವಿಪತ್ತು ನಿರ್ವಹಣೆ ತಂಡದವರು ಸೇರಿ ಪದೇ ಪದೇ ಸ್ವಚ್ಛತೆ ಮಾಡುತ್ತಿದ್ದು ಮತ್ತು ಬಂದಂತ ಪ್ರವಾಸಿಗರಿಗೆ ಅರಿವು ಮೂಡಿಸುತ್ತಿದ್ದರು ಯಾವುದೇ ರೀತಿಯ ಪ್ರಯೋಜನವಿಲ್ಲ. ಮತ್ತೆ ಅದೇ ರೀತಿ ಅಲ್ಲಿಯ ಗಲೀಜು ಮತ್ತು ಚಪ್ಪಲಿಯನ್ನು ಹಾಕಿಕೊಂಡು ಪ್ರವಾಸಿಗರು ಇರುತ್ತಾರೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಈ ಮೂಲಕ ಮನವಿ ಸಲ್ಲಿಸಲಾಯಿತು.
