
ಬೆಂಗಳೂರು : ಶನಿವಾರ ನೆಡೆದ ರಾಷ್ಟ್ರ ಕವಿ “ಕುವೆಂಪುರವರ ವಿಚಾರ ಕ್ರಾಂತಿ ” ಪುಸ್ತಕದ ಜನಾರ್ಪಣೆ ಕಾರ್ಯ ಕ್ರಮದಲ್ಲಿ. ಸಮಾಜವಾದಿ ಚಿಂತಕರು.ಸಮಸಮಾಕ್ಕಾಗಿ ಕಲ್ಯಾಣ ರಾಜ್ಯ ಕಲ್ಪನೆಯ ಕನಸುಗಾರರು. ಸಂವಿಧಾನ ಪ್ರೇಮಿಗಳು .ಕರ್ನಾಟಕ ರಾಜ್ಯದ ಜನಪ್ರಿಯ,ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಮಾತನ್ನಾಡುತ್ತ.
ಕುವೆಂಪು ವಿಚಾರಧಾರೆಗಳು ಅವರ ವೈಜ್ಞಾನಿಕ .ವೈಚಾರಿಕ . ಮನೋಭಾವ ಸಮಾಜದ ಕಟ್ಟುಪಾಡುಗಳ ಬಗ್ಗೆ ಮೌಢ್ಯ ಕಂದಾಚಾರಗಳ ಬಗ್ಗೆ.ನಾಡು ನುಡಿ ನೆಲ.ಜಲದ ಬಗ್ಗೆ . ಅವರಿಗಿದ್ದ ಜನಪರ ಕಾಳಜಿ ಸಾಮಾಜಿಕ ಸಾಂಸ್ಕೃತಿಕ ಕಳಕಳಿ ಅವರ ವಿಶ್ವ ಮಾನವ ಪರಿಕಲ್ಪನೆ ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಕೃತಿಯನ್ನು ಬರಗೂರು ರಾಮಚಂದ್ರಪ್ಪನವರ ಸಂಪಾದಕತ್ವದಲ್ಲಿ. ಬೆಂಗಳೂರಿನ ಜನ ಪ್ರಕಾಶನವು ಹೊರತಂದ. ” ಕುವೆಂಪು ವಿಚಾರ ಕ್ರಾಂತಿ” ಪುಸ್ತಕವನ್ನು .ಜನಾರ್ಪಣೆ ಮಾಡಿ.
ಕುವೆಂಪುರವರ ವೈಜ್ಞಾನಿಕ. ಮತ್ತು ವೈಚಾರಿಕ ಚಿಂತನೆಗಳಾದ. ಧಾರ್ಮಿಕ . ಸಾಮಾಜಿಕ .ಆರ್ಥಿಕ .ಶೈಕ್ಷಣಿಕ ಚಿಂತನೆಗಳ ಕ್ರಾಂತಿಯ ಅನಿವಾರ್ಯತೆ ಇಂದು ಮುಂದು ಎಂದೆಂದಿಗೂ ಪ್ರಸ್ತುತ .ಇವತ್ತಿನ ಯುವ ಸಮುದಾಯ ಕುವೆಂಪುರವರ ಸಾಹಿತ್ಯವನ್ನು ಓದುವ ಮೂಲಕ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ .
ಅವರ ವಿಶ್ವ ಮಾನವ ಸಂದೇಶವನ್ನು ಅರ್ಥೈಸಿಕೊಂಡು. ಅವರ ಆಶಯದಂತೆ. “ಗುಡಿ ಚರ್ಚು ಮಸೀದಿಗಳ ಎಲ್ಲೆಯನ್ನು ದಾಟಿ” ಸಮ ಸಮಾಜದ ಕಡೆಗೆ. ಸಹೋದರತ್ವ. ಭ್ರಾತೃತ್ವದ .ಪ್ರೀತಿ. ವಾತ್ಸಲ್ಯ. ಮಮಕಾರ. ಸಮನ್ವಯ ಸಂದೇಶದ ಕಡೆಗೆ. ಎಲ್ಲರು ಸಾಗಬೇಕಾಗಿದೆ . ರವರ ಆಶಯದಂತೆ ಸಮಾಜವನ್ನು “ಸರ್ವ ಜನರ ಶಾಂತಿಯ ತೋಟವನ್ನಾಗಿ” ಮಾಡಬೇಕಾದ ಜವಾಬ್ದಾರಿ ನಮ್ಮದಾಗಿದೆ.
ಇವತ್ತು ದೇಶದಲ್ಲಿ ದೇವರು. ಧರ್ಮ. ಮೌಢ್ಯ ಕಂದಾಚಾರದ ಹೆಸರಿನಲ್ಲಿ ಜಾತಿ ಜಾತಿಗಳ ಧರ್ಮ ಧರ್ಮಗಳ ನಡುವೆ ಕಂದರವನ್ನು ಸೃಷ್ಟಿಸಿ. ಅಶಾಂತಿಯನ್ನು ಮೂಡಿಸಿ. ಭಾರತದ ಬಹುತ್ವಕ್ಕೆ. ಸಾರ್ವಭೌಮತೆಗೆ. ಧರ್ಮ ನಿರಾಪೇಕ್ಷತೆಗೆ. ಒಕ್ಕೂಟ ವ್ಯವಸ್ಥೆಗೆ .ಧಕ್ಕೆ ತರುವಂತಹ ಕೆಲಸವನ್ನು ಮತಿಯ ವಾದಿಗಳು. ಧಾರ್ಮಿಕ ಮೂಲಭೂತವಾದಿಗಳು. ರಾಜಕಾರಣದಲ್ಲಿ ಧರ್ಮವನ್ನು ಬೆರಸಿ ಅಶಾಂತಿಯನ್ನು ಮೂಡಿಸಲು ಅವಣಿಸುತ್ತಿದ್ದಾರೆ. ಹಾಗಾಗಿ ಬುದ್ಧ .ಬಸವ. ಅಂಬೇಡ್ಕರ್. ಕುವೆಂಪು.ರವರಂತಹ ದಾರ್ಶನಿಕರ ಸಂದೇಶವನ್ನು ಎಲ್ಲರ ಮನ ಮತ್ತು ಮನೆಗಳಿಗೆ ಮುಟ್ಟಿಸುವಂತಹ ಬಹು ದೊಡ್ಡ ಸವಾಲುಗಳು ನಮ್ಮ ಮುಂದೆ ಇದೆ.
ಅದಕ್ಕಾಗಿ ಒಂದು ಬಹು ದೊಡ್ಡ ಆದೋಲನವೇ ನಡೆಯಬೇಕಾದ ಅನಿವಾರ್ಯತೆ ಇದೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈ ತೆರನಾದ ವೈಜ್ಞಾನಿಕ. ವೈಚಾರಿಕ . ವಿಚಾರ ಕ್ರಾಂತಿಗಳ ಸಾಕ್ಷರತಾ ಆಂದೋಲನದ ಅಗತ್ಯತೆಯ ಬಗ್ಗೆ ಬೆಳಕು ಚಲ್ಲಿದರು.
ಈ ಕಾರ್ಯಕ್ರಮ ಮುಖ್ಯ ಅಥಿತಿಗಳಾಗಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು. ಸಮಾಜಮುಖಿ ಚಿಂತಕರು. ರಾಜ್ಯ ಸಂವಿಧಾನ ಓದು ಅಭಿಯಾನ ಕರ್ನಾಟಕದ ನೇತಾರರು. ಆದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ . ಡಾಕ್ಟರ್ ಹೆಚ್ ಎನ್ ನಾಗಮೋಹನ್ ದಾಸ್ ಸಾರ್ ಮಾತನಾಡುತ್ತಾ .ಇವತ್ತು ನಮ್ಮ ಸಂವಿಧಾನ ಓದು ಅಭಿಯಾನ ತಂಡ. ಹೋದಲ್ಲೆಲ್ಲ ಜನರಿಂದ ಸಂವಿಧಾನ ಓದು ಅಭಿಯಾನಕ್ಕೆ ಸಿಗುತ್ತಿರುವ ಜನರ ಸ್ಪಂದನೆಯನ್ನು ಗಮನಿಸಿದರೆ.
ಜನರಿಗೆ ವೈಜ್ಞಾನಿಕ .ವೈಚಾರಿಕ. ಸಾಕ್ಷರತಾ ಹಸಿವು ಎಲ್ಲಾ ಕಡೆ ಇರುವುದು ಕಂಡುಬರುತ್ತಿದೆ.ಹಾಗಾಗಿ ಈ ಕೆಲಸವನ್ನು ನಾಡಿನ ಸಾಹಿತಿಗಳು. ಪ್ರಗತಿಪರ ಚಿಂತಕರು.ನಾಡಿನ ಜನಪರ ಸಂಘಟನೆಗಳು.ಚಳುವಳಿಗಳ ಹೋರಾಟಗಾರರು. ಈ ಕೆಲಸವನ್ನು ಮಾಡಬೇಕಾಗಿದೆ .
ಪದೇ ಪದೇ ವೈಜ್ಞಾನಿಕ. ವೈಚಾರಿಕ ಚಿಂತಕರ ಮೇಲೆ. ಅವರ ಚಿಂತನೆಗಳ ಮೇಲೆ. ಅವರ ಕೃತಿಗಳ ಮೇಲೆ. ಆಗಾಗ್ಯೆ ದಾಳಿಗಳನ್ನ ಮಾಡುತ್ತಲೇ ಬರುತ್ತಿದ್ದಾರೆ. ನಮ್ಮ ಸಂವಿಧಾನದಲ್ಲಿನ “ಸರ್ವ ಧರ್ಮ ಸಮನ್ವಯತೆ ಜಾತ್ಯತೀತತೆ ಬಗ್ಗೆ ” secularism and socialism “ಬಗ್ಗೆ ನಮ್ಮ ಸರ್ವ ಶ್ರೇಷ್ಠ ನ್ಯಾಯಾಲಯದ 1973 ರ ಕೇಶವನಂದ ಭಾರತಿ ಕೇರಳ ರಾಜ್ಯ ಮತ್ತು ಉತ್ತರ ಪ್ರದೇಶ.1994 ರ .ಎಸ್ ಆರ್ ಬೊಮ್ಮಾಯಿ ಯೂನಿಯನ್ ಆಫ್ ಇಂಡಿಯಾ, 1995 ರ. ಎಲ್ ಐ ಸಿ ಗ್ರಾಹಕರ ಪ್ರಕರಣ 2022 ರ. ಆರ್ ಎಸ್ ಎಸ್ ಅಶ್ವಿನ್ ಉಪಾಧ್ಯಾಯ ಹಾಗೂ ಬಿ ಜೆ ಪಿ ರಾಜ್ಯಸಭಾ ಸದಸ್ಯರಾದ ಸುಬ್ರಹ್ಮಣ್ಯ ಸ್ವಾಮಿ. ಈ ಎಲ್ಲಾ ಪ್ರಕರಣದಲ್ಲಿಯು ಸಹ secularism and Socialism ಎಂಬುದು ನಮ್ಮ ಎಲ್ಲಾ ಸಂವಿಧಾನ ರಚನಾ ಸಭೆಯ ಸದಸ್ಯರ ಅಭಿಪ್ರಾಯ ಅದರಲ್ಲೂ ಡಾಕ್ಟರ್ ಬಾ ಬಾ ಸಾಹೇಬ್ ಅಂಬೇಡ್ಕರ್ ರವರ ಮೂಲ ಆಶಯವೇ ಇದಾಗಿತ್ತು
ಹಾಗಾಗಿ ನಮ್ಮ ಸಂವಿಧಾನದ ಆರ್ಟಿಕಲ್ 14 .15. 16.25.26.29 ಇಂತಹ ಅನೇಕ ಆರ್ಟಿಕಲ್ಗಳು ಜಾತ್ಯತೀತತೆ. ಮತ್ತು ಧರ್ಮ ನಿರಾಪೇಕ್ಷತೆಗಳು. ಸಂವಿಧಾನದ ಅಂತರ್ಗತ ಅಂಶಗಳೇ ಆಗಿದ್ದರೂ. ಅದನ್ನ ವಿದೇಶಿ ಎರವಲು. ನಮ್ಮ ಮೂಲ ಸಂವಿಧಾನದಲ್ಲಿ ಈ ಅಂಶಗಳಿರಲ್ಲಿಲ್ಲ. ಮತ್ತು ಅಂಬೇಡ್ಕರ್ ಈ ಆಶಯಗಳನ್ನು ಹೊಂದಿರಲಿಲ್ಲ. ಇದು ನಮ್ಮ ಸಂವಿಧಾನಕ್ಕೆ ಮಾಡುವ ಅಪಚಾರ.ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ಮಾಡಿದ ಅವಮಾನ. ಎಂದೆಲ್ಲ ಅಪ ವ್ಯಾಖ್ಯಾನ ಮಾಡುವಂತಹ ಕೆಲಸ. 26 ನವೆಂಬರ್ 1949 ರಲ್ಲಿ ನಮ್ಮ ಸಂವಿಧಾನ ಅಂಗೀಕಾರವಾದ ದಿನದಿಂದ ಹಿಡಿದು. ಇವತ್ತಿನ ವರೆವಿಗೂ ನಡೆಯುತ್ತಿರುವುದರಿಂದ. ಇವತ್ತು ಬುದ್ಧ. ಬಸವ. ಅಂಬೇಡ್ಕರ್. ಕುವೆಂಪುರವರಂತಹ. ಅನೇಕ ದಾರ್ಶನಿಕರ ವೈಜ್ಞಾನಿಕ. ವೈಚಾರಿಕ .ವಿಚಾರಗಳನ್ನು ಎಲ್ಲಾ ಕಡೆ ಬಿತ್ತಬೇಕಾಗಿದೆ .
ಆ ಮೂಲಕ ಚಿಂತಕರನ್ನ ಅವರ ಚಿಂತನೆಗಳನ್ನ. ಹಾಗೂ ನಮ್ಮ ಸಂವಿಧಾನದ ಆಶಯಗಳನ್ನ.ನಮ್ಮ ಸಂವಿಧಾನವನ್ನು ಸಂರಕ್ಷಣೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಇದೆಯೆಂದು ತಿಳಿಸಿದರು. ಕುವೆಂಪು ವಿಚಾರ ಕ್ರಾಂತಿ ಕೃತಿಯ ಸಂಪಾದಕರಾದ. ಬರಗೂರು ರಾಮಚಂದ್ರ ಸಾರ್ ರವರು. ಈ ಕೃತಿಯನ್ನು ಹೊರತರಬೇಕಾದಂತಹ ಅಗತ್ಯತೆ. ಮತ್ತು ಅನಿವಾರ್ಯತೆಯ ಬಗ್ಗೆ ಮಾತನ್ನಾಡಿ .
ಜನ ಇಂತಹ ಪುಸ್ತಕಗಳನ್ನು ಓದುವ ಮೂಲಕ ಜನಜಾಗ್ರತಿಯನ್ನು ಮೂಡಿಸುವ ಕೆಲಸವನ್ನು ಮಾಡಬೇಕೆಂದು ಕರೆ ನೀಡಿದರು. ಮುಖ್ಯ ಅಥಿತಿಗಳಾಗಿದ್ದ ನಾಡೋಜ ಹಂ. ಪ.ನಾ. ಸಾರ್ ತಮ್ಮ ಗುರುಗಳಾಗಿದ್ದ ಕುವೆಂಪು ರವರ ಆದರ್ಶ. ಶಿಸ್ತು. ಸಂಯಮ. ಬದ್ಧತೆ. ಸಮರ್ಪಣಾ ಮನೋಭಾವ. ಪ್ರಾಮಾಣಿಕತೆಗಳು ಇವತ್ತಿನ ಯುವಕರಿಗೆ ದಿಕ್ಸೂಚಿ ಹಾಗಾಗಿ ಕುವೆಂಪುರವರ ವಿಚಾರ ಕ್ರಾಂತಿ ಈ ಕೃತಿ
ಈ ಸಂದರ್ಭದಲ್ಲಿ ಹೂರಬರುತ್ತಿರುವುದು ಅತ್ಯಂತ ಔಚಿತ್ಯ ಪೂರ್ಣವಾದುದ್ದಾಗಿದೆ ಎಂದು ತಿಳಿಸಿದರು.
ಬೆಂಗಳೂರು ಜನ ಪ್ರಕಾಶನದ ಪ್ರಕಾಶಕರು .ರಾಜ್ಯ ಸಂವಿಧಾನ ಓದು ಅಭಿಯಾನದ ಮುಖಂಡರು. ಆದ ಬಿ ರಾಜಶೇಖರ ಮೂರ್ತಿ ಸಾರ್. ಈ ಕೃತಿ ಪ್ರಸ್ತುತ ಈ ಸಂದರ್ಭದಲ್ಲಿ ಹೊರತರುತ್ತಿರುವಂತಹ ಮಹತ್ವದ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಕುವೆಂಪುರವರ ಅಳಿಯರಾದ ಚಿದಾನಂದ ಗೌಡ್ರು ಹಾಗೂ ಜನ ಪ್ರಕಾಶನದ ಶ್ರೀ ಹರಿ ಸಾರ್. ರಾಜ್ಯ ಸಂವಿಧಾನ ಓದು ಅಭಿಯಾನ ಕರ್ನಾಟಕದ ಮಾರ್ಗದರ್ಶಕರಾದ. ಹೆಚ್ ಎನ್ ಹರಿ ಸಾರ್. ಹಾಗೂ ಎಲ್ಲಾ ಸಂವಿಧಾನ ಓದು ಬಳಗ. ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ. ಸಾಹಿತಿಗಳು .ಚಿಂತಕರು. ಸಮಾಜಮುಖಿ ಸಂಘಟನೆಗಳ ಹೋರಾಟಗಾರರು. ಜನಪರ ಸಂಘಟನೆಗಳ ನಾಯಕರುಗಳಿಂದ .ತುಂಬಿ ತುಳುಕುತ್ತಿದ್ದ ಸಭಾಂಗಣ ಕುವೆಂಪು ವಿಚಾರ ಕ್ರಾಂತಿಗೆ ಸಾಕ್ಷಿಯಾಗಿತ್ತು.
