ಮನವಿ ಮಾಡುವ ಮುನ್ನಹಾನುಬಾಳು ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ದೇವಾಲದಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಸಹಯೋಗದಿಂದ ಸತತವಾಗಿ ಎರಡನೇ ವಾರವೂ ಬೆಟ್ಟದ ಭೈರವೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ ಮಾಡಿದ ನಂತರಈ ಕೆಳಕಂಡ ಸಮಸ್ಯೆಗಳಾದ

1. ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಶೌಚಾಲಯದ ಕೊರತೆ, ಇದ್ದು ವಿಶೇಷವಾಗಿ ಮಹಿಳೆಯರಿಗೆ ವಿಪರೀತ ಅಸೌಕರ್ಯ.

2. ಪಾದರಕ್ಷೆ ತ್ಯಜಿಸಲು ನಿರ್ದಿಷ್ಟ ಸ್ಥಳವಿಲ್ಲದ ಕಾರಣದಿಂದ ದೇವಾಲಯದ ಪ್ರವೇಶದವರೆಗೂ ಮಲಿನತೆ ಉಂಟಾಗಿದ್ದು ಪಾದರಕ್ಷೆಗಳನ್ನು ಬಿಡಲು ಸೂಕ್ತವಾದ ವ್ಯವಸ್ಥೆ ಕಲ್ಪಿಸುವುದು.

3. ವಾಹನ ನಿಲುಗಡೆಗೆ ಸರಿಯಾದ ಸ್ಥಳವಿಲ್ಲದ ಕಾರಣದಿಂದ ದೇವಸ್ಥಾನದ ಆವರಣದಲ್ಲಿರುವ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥಿತ ಸೌಕರ್ಯ ಕಲ್ಪಿಸುವುದು

4. ಪ್ರವಾಸಿಗರು ಸ್ಥಳದ ಅಸ್ಥಿರ ಪರಿಸ್ಥಿತಿಯಿಂದ ಗಂಭೀರ ಅಸಮಾಧಾನ ವ್ಯಕ್ತಪಡಿಸುತ್ತಿರುವುದು.

5. ಸ್ವಚ್ಛತೆ ನಿರ್ವಹಣೆಯ ಕೊರತೆಯಿಂದ ಸ್ಥಳದ ಪವಿತ್ರತೆಯೇ ಹದಗೆಡುವ ಸ್ಥಿತಿಗೆ ಬಂದಿದೆ.ಈ ಎಲ್ಲ ಸಮಸ್ಯೆಗಳ ಬಗ್ಗೆ ಈಗಾಗಲೇ ಮೌಖಿಕವಾಗಿ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದರು,

ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ, ನಮ್ಮ ಕ್ಷೇತ್ರದ ಭಕ್ತಾದಿಗಳು, ಗ್ರಾಮಸ್ಥರು ಮತ್ತು ಪ್ರವಾಸಿಗರ ಹಿತಕ್ಕಾಗಿ ನೀವು ತ್ವರಿತವಾಗಿ ಈ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕೋರಿ ಕೊಳ್ಳುತ್ತೇವೆ ಈ ಮನವಿಗೆ ಎಂಟು (8) ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ , ಸಾರ್ವಜನಿಕರ, ಗ್ರಾಮಸ್ಥರ ಹಾಗೂ ಪ್ರವಾಸಿಗರ ಸಹಭಾಗಿತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಕಚೇರಿಗಳ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗಗನ್ ಗೌಡ – ತಾಲ್ಲೂಕು ಅಧ್ಯಕ್ಷರು ಸಕಲೇಶಪುರ ತಾಲೂಕು ಘಟಕ ಸಕಲೇಶಪುರ ಸಂಗ್ರಾಮ್ ಹೋಡಚಳ್ಳಿ – ಹೋಬಳಿ ಉಸ್ತುವಾರಿಸುನೀಲ್ ದೇವಲದಕೆರೆ – ರೈತ ಮೋರ್ಚಾ ಉಪಾಧ್ಯಕ್ಷಅಭಿಷೇಕ್ ಕುಮಾರಹಳ್ಳಿ – ಯುವ ಮೋರ್ಚಾ ಅಧ್ಯಕ್ಷನವೀನ್ – ತಾಲ್ಲೂಕು ಕಾರ್ಯದರ್ಶಿಆದರ್ಶ್ – ರೈತ ಮೋರ್ಚಾ ಅಧ್ಯಕ್ಷರಮೇಶ್ – ಕಾರ್ಮಿಕ ಘಟಕದ ಅಧ್ಯಕ್ಷಹಾಗೂ ಹಾನುಬಾಳು ಹೋಬಳಿ ಘಟಕದ ಕಾರ್ಯಕರ್ತರು. ಎಚ್ಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.,

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *