ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಹಾನುಬಾಳು ಗ್ರಾಮದ ಗ್ರಾಮಸ್ಥರ ಸಹಯೋಗದಿಂದ ಸತತವಾಗಿ ಎರಡನೇ ವಾರವೂ ಬೆಟ್ಟದ ಭೈರವೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕೆಳಕಂಡ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ..ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಶೌಚಾಲಯದ ಸಂಪೂರ್ಣ ಕೊರತೆ, ವಿಶೇಷವಾಗಿ ಮಹಿಳೆಯರಿಗೆ ವಿಪರೀತ ಅಸೌಕರ್ಯ..ಪಾದರಕ್ಷೆ ತ್ಯಜಿಸಲು ನಿರ್ದಿಷ್ಟ ಸ್ಥಳವಿಲ್ಲದ ಕಾರಣದಿಂದ ದೇವಾಲಯದ ಪ್ರವೇಶದವರೆಗೂ ಮಲಿನತೆ..ವಾಹನ ನಿಲುಗಡೆಗೆ ಸರಿಯಾದ ಸ್ಥಳವಿಲ್ಲದ ಕಾರಣದಿಂದ ಆಗುವ ಅನಿವಾರ್ಯ ತೊಂದರೆ..ಪ್ರವಾಸಿಗರು ಸ್ಥಳದ ಅಸ್ಥಿರ ಪರಿಸ್ಥಿತಿಯಿಂದ ಗಂಭೀರ ಅಸಮಾಧಾನ ವ್ಯಕ್ತಪಡಿಸುತ್ತಿರುವುದು.

ಸ್ವಚ್ಛತೆ ನಿರ್ವಹಣೆಯ ಕೊರತೆಯಿಂದ ಸ್ಥಳದ ಪವಿತ್ರತೆಯೇ ಹದಗೆಡುವ ಸ್ಥಿತಿಗೆ ಬಂದಿದೆ.ಈ ಎಲ್ಲ ಸಮಸ್ಯೆಗಳ ಬಗ್ಗೆ ನಾವು ಈಗಾಗಲೇ ಮೌಖಿಕವಾಗಿ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದರು, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಈ ಹಿನ್ನೆಲೆಯಲ್ಲಿ, ನಮ್ಮ ಕ್ಷೇತ್ರದ ಭಕ್ತಾದಿಗಳು, ಗ್ರಾಮಸ್ಥರು ಮತ್ತು ಪ್ರವಾಸಿಗರ ಹಿತಕ್ಕಾಗಿ ನೀವು ತ್ವರಿತವಾಗಿ ಈ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕೋರಿಕೊಳ್ಳುತ್ತೇವೆ ತಹಸೀಲ್ದಾರ್ ರವರಿಗೆ ಮನವಿ ಮಾಡಿದರು.ತ್ವರಿತವಾಗಿ ಸಾಗಬೇಕಾದ ಕೆಲಸಗಳು .ಶೌಚಾಲಯದ ತಾತ್ಕಾಲಿಕ ಹಾಗೂ ಶಾಶ್ವತ ವ್ಯವಸ್ಥೆ..ಪಾದರಕ್ಷೆ ತ್ಯಜಿಸಲು ನಿರ್ದಿಷ್ಟ ಸ್ಥಳದ ನಿರ್ಮಾಣ..ವಾಹನ ನಿಲುಗಡೆಗೆ ಸೂಚ್ಯಂಕ ಪ್ರದೇಶದ ನಿಗದಿಪಡಿಕೆ..ಸ್ವಚ್ಛತೆ ನಿರ್ವಹಣೆಗೆ ನಿರ್ದಿಷ್ಟ ಸಿಬ್ಬಂದಿ ನೇಮಕ.ಈ ಮನವಿಗೆ ಎಂಟು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ , ಸಾರ್ವಜನಿಕರ, ಗ್ರಾಮಸ್ಥರ ಹಾಗೂ ಪ್ರವಾಸಿಗರ ಸಹಭಾಗಿತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಕಚೇರಿಗಳ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಎಂದು ಕರವೇ ನಾರಾಯಣಗೌಡ ಬಣದ ತಾಲ್ಲೂಕು ಗಗನ್ ಹಾಡ್ಲಹಳ್ಳಿ ಎಚ್ಚರಿಸುತ್ತಿದ್ದಾರೆ .

ಈ ಸಂದರ್ಭದಲ್ಲಿ ಸಂಗ್ರಾಮ್ ಹೋಡಚಳ್ಳಿ – ಹೋಬಳಿ ಉಸ್ತುವಾರಿ,ಸುನೀಲ್ ದೇವಲದಕೆರೆ – ರೈತ ಮೋರ್ಚಾ ಉಪಾಧ್ಯಕ್ಷ,ಅಭಿಷೇಕ್ ಕುಮಾರಹಳ್ಳಿ – ಯುವ ಮೋರ್ಚಾ ಅಧ್ಯಕ್ಷ,ನವೀನ್ – ತಾಲ್ಲೂಕು ಕಾರ್ಯದರ್ಶಿ,ಆದರ್ಶ್ – ರೈತ ಮೋರ್ಚಾ ಅಧ್ಯಕ್ಷ,ರಮೇಶ್ – ಕಾರ್ಮಿಕ ಘಟಕದ ಅಧ್ಯಕ್ಷ, ಹಾಗೂ ಹಾನುಬಾಳು ಹೋಬಳಿ ಘಟಕದ ಕಾರ್ಯಕರ್ತರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *