ಬೇಲೂರು ಪ್ರಾದೇಶಿಕ ಕೆ ಎಸ್ ಆರ್ ಟಿ ಸಿ ಡಿಪೋ ದಲ್ಲಿ ಬಸ್ ಚಾಲಕ ಹಾಗು ನಿರ್ವಾಹಕಬಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಟಿಗನಹಳ್ಳಿ ಗ್ರಾಮದ ಹರೀಶ್ ಸೋಮವಾರ ಮುಂಜಾನೆ ಕೆಲಸಕ್ಕೆ ಆಗಮಿಸಿದ ವೇಳೆ ಡಿಪೋ ವ್ಯವಸ್ಥಾಪಕಿ ಶಹಜೀಯ ಬಾನು ಕೆಲಸ ನೀಡದೆ ಮಾನಸಿಕವಾಗಿ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಡಿಪೋದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದ ಇವರನ್ನು ಚಾಲಕರು ಹಾಗು ಸಿಬ್ಬಂದಿಗಳು ಕೂಡಲೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡೆಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

*ಡಿಪೋ ವ್ಯವಸ್ಥಾಪಕಿ ಶಹಜೀಯ ಭಾನು ವ್ಯಾಪಕ ಕಿರುಕುಳ ಬಸ್ ಗಳನ್ನು ಹೊರತೆಗೆಯದೆ ಪ್ರತಿಭಟನೆಗೆ ಇಳಿದ ಚಾಲಕರು

ಇವರು ಬೇಲೂರು ಡಿಪೋಗೆ ಬಂದ ನಂತರ ಚಾಲಕರು ಜೊತೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಉಡಾಫೆಯಿಂದ ವರ್ತಿಸುವುದು ಮತ್ತು ಯಾರು ಅವರ ವಿರುದ್ಧ ಇರುತ್ತಾರೆ ಅವರನ್ನು ಕೆಲಸದಿಂದ ವಜಾ ಮಾಡುತ್ತಾರೆ.ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು ಇದರಿಂದಾಗಿ ನಮ್ಮ ಜೊತೆಗಾರ ವಿಷ ಕುಡಿಯುವ ಪರಿಸ್ಥಿತಿ ಬಂದಿದ್ದು ಕೂಡಲೆ ಅವರು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವರೆಗೂ ನಾವು ಕೆಲಸ ಮಾಡುವುದಿಲ್ಲ ಎಂದು ಚಾಲಕರು ಪ್ರತಿಭಟನೆ ಮಾಡಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಹೆಚ್ ಕೆ ಸುರೇಶ್ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದು ತಕ್ಷಣ ಆಸ್ಪತ್ರೆ ಗೆ ಆಗಮಿಸಿ ಪ್ರಥಮ ಚಿಕಿತ್ಸಾ ಕೊಡಿಸಿದ ನಂತರ ಜಿಲ್ಲಾಸ್ಪತ್ರೆಗೆ ಕಳಿಸಿದ ನಂತರ ಮಾತನಾಡಿದ ಅವರು ಬೇಲೂರು ಡಿಪೋ ಮ್ಯಾನೇಜರ್ ವ್ಯವಸ್ಥಾಪಕಿ ಹಾಗು ಡಿಪೋ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಅವರಿಂದಾಗಿ ಇಲ್ಲಿ ಯಾವೊಬ್ಬ ಚಾಲಕ ಹಾಗು ನಿರ್ವಾಹಕರು ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕೆಲಸಗಾರರಿಗೆ ತೊಂದರೆ ನೀಡುತ್ತಿದ್ದು ನನಗೆ ಮಾಹಿತಿ ಬಂದ ನಂತರ ನಾನು ಸಹ ಇವರ ವಿರುದ್ಧ ಕ್ರಮ ಕೈಗೊಂಡು ಅಮಾನತು ಕೂಡ ಮಾಡಿಸಿದ್ದೇನೆ‌ಆದರೂ ಇವರ ದೌರ್ಜನ್ಯ ದಬ್ಬಾಳಿಕೆ ನಿಂತಿಲ್ಲ.ಇಂದು ಇವರ ದೌರ್ಜನ್ಯಕ್ಕೆ ಒಬ್ಬ ಚಾಲಕ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ನೇರ ಹೊಣೆ ಇವರಿಬ್ಬರೆ .ಹರೀಶ್ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರಾರ್ಥಿಸೋಣ ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ.ಎಲ್ಲ ರೀತಿಯ ಸಹಕಾರ ಅವರ ಕುಟುಂಬಕ್ಕೆ ನೀಡುವುದಾಗಿ ಭರವಸೆ ನೀಡಿದ ಅವರು ಕೂಡಲೆ ಇವರಿಬ್ಬರ ಮೇಲೆ ಕಠಿಣ ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಮಾನ್ಯ ಸಚಿವರಿಗೆ ದೂರವಾಣಿ ಮೂಲಕ ಮನವಿ ಮಾಡಿದ ಅವರು ನನ್ನ ಕ್ಷೆಡತ್ರದಲ್ಲಿ ಯಾವುದೇ ಮೇಲಾಧಿಕಾರಿಗಳು ಸಹದ್ಯೋಗಿಗಳ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಲು ಬಿಡುವುದಿಲ್ಲ ಎಂದ ಅವರು ಇದಕ್ಕೆಲ್ಲಾ ಮೂಲ ಕಾರಣ ಬೇಲೂರು ಹಾಗು ಸಕಲೇಶಪುರ ಡಿಪೋಗಳು ಚಿಕ್ಕಮಗಳೂರು ಗೆ ಜವಬ್ದಾರಿ ಕೊಟ್ಟಿರುವುದು ಇಷ್ಟಕ್ಕೆಲ್ಲ ತೊಂದರೆ ಆಗುತ್ತಿರುವುದು ಸದನದಲ್ಲಿ ಇದರ ಬಗ್ಗೆ ಚರ್ಚಿಸಿ ಘಟಕ ಜವಬ್ದಾರಿ ಹಾಸನ ಅಥವಾ ಸಕಲೇಶಪುರ ಕ್ಕೆ ವರ್ಗಾವಹಿಸುವಂತೆ ಸದನದಲ್ಲಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು

ಅಲ್ಲದೆ ಯಾವುದೇ ರೀತಿಯ ಚಾಲಕರಿಗೆ ಮತ್ತು ನಿರ್ವಾಹಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು * ಕುಟುಂಬಸ್ಥರು ಕಣ್ಣೀರು ವಿಷಯ ತಿಳಿದು ತನ್ನ ಮಗನ ಸ್ಥಿತಿಯನ್ನು ಕಂಡು ತಾಯಿ ಹಾಗು ಮಗಳು ಅನಿಲ್ ಆಗುತ್ತಿದ್ದ ದೃಶ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು

ಸ್ಥಳಕ್ಕೆ ಆಗಮಿಸಿದ ವಿಭಾಗಿಯ ನಿಯಂತ್ರಣ ಅಧಿಕಾರಿ ಕೂಡಲೇ ನಮಗೆ ಇಲ್ಲಿ ಕೆಲಸ ಮಾಡಲು ಭಯ ಆಗುತ್ತಿದ್ದು ಪ್ರತಿನಿತ್ಯ ಇವರ ಕಿರುಕುಳ ತಾಳಲಾಗುತ್ತಿಲ್ಲ ಎಂದು ಚಾಲಕರು ನಿರ್ವಾಹಕರು ಅವರ ಮುಂದೆ ಧರಣಿ ನಡೆಸಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *