
ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ 2025-26 ನೇ ಸಾಲಿನ ಅಧ್ಯಕ್ಷರಾಗಿ ರೊಟೇರಿಯನ್ ಹೆಚ್.ಡಿ.ವಜ್ರಕುಮಾರ್ ರವರು, ಕಾರ್ಯದರ್ಶಿಯಾಗಿ ರೊಟೀರಿಯನ್ ಕೆ.ಎಸ್. ಯೋಗೇಶ್ ರವರು, ಉಪಾಧ್ಯಕ್ಷರಾಗಿ ರೋಟೇರಿಯನ್ ಮಂಜುನಾಥ್ ರವರು, ಖಜಾಂಚಿಯಾಗಿ ರೋಟಿರಿಯೆನ್ ವಿ.ಎಂಗವಿಗೌಡ ರವರು, ಮತ್ತು ಜಂಟಿ ಕಾರ್ಯದರ್ಶಿಯಾಗಿ ರೊಟೀರಿಯೆನ್ ಶಶೀಂದ್ರನಾಥನ್ ರವರು ದಿನಾಂಕ :13-07-2025 ರ ಭಾನುವಾರ ಹಾಸನದ “ನಂದಗೋಕುಲ ಕನ್ವೆನ್ಷನ್ ಹಾಲ್” ನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ಹಿರಿಯ ಕಿರಿಯ ಸದಸ್ಯರುಗಳು ಮತ್ತು ಅವರ ಕುಟುಂಬ ವರ್ಗದವರು ಮತ್ತು ಸ್ನೇಹಿತರುಗಳು ಆಗಮಿಸಿ ನೂತನ ತಂಡಕ್ಕೆ ಶುಭಾಶಯವನ್ನು ಕೋರಿದರು.



