
ಸಕಲೇಶಪುರ:- ಪಟ್ಟಣದ ಟೋಲ್ ಬಳಿ ಇರುವ ಬೈರವೇಶ್ವರ ಕಾಂಪ್ಲೆಕ್ಸ್ ನಲ್ಲಿ ಆರಂಭವಾಗಲಿರುವ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಸಂಘದ ಕಚೇರಿಯನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ರವರು ನಾಳೆ ಬೆಳಿಗ್ಗೆ 12:00 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.
ಸಕಲೇಶಪುರ ತಾಲ್ಲೂಕು ಸೇರಿದಂತೆ ಹಾಸನ ಜಿಲ್ಲೆಯ ವಿವಿಧ ಹೋಬಳಿಗಳ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಂಘಟನೆಯ ಬೆಂಬಲಿಗರು ಸುಮಾರು 50ರಿಂದ 60 ಕಾರುಗಳು ಮೂಲಕ ಹಾಗೂ 15 ರಿಂದ 20 ಆಟೋ ರಿಕ್ಷಾಗಳ ಮೂಲಕ ಟಿ. ಎ ನಾರಾಯಣಗೌಡರಿಗೆ ಸ್ವಾಗತ ಕೋರುವ ಮೂಲಕ ಸಕಲೇಶಪುರದ ಮುಖ್ಯ ಬೀದಿಯಲ್ಲಿ ರ‍್ಯಾಲಿ ನಡೆಸಲಾಗುವುದೆಂದು ತಾಲೂಕು ಕರವೇ ಅಧ್ಯಕ್ಷರಾದ ಗಗನ್ ಹಾಡ್ಲಹಳ್ಳಿ ತಿಳಿಸಿದ್ದಾರೆ.
