ಸಕಲೇಶಪುರ : ಕದಂಬ ಸೈನ್ಯ ಕನ್ನಡ ಸಂಘಟನೆಯ ವತಿಯಿಂದ ಕದಂಬ, ಚಾಲುಕ್ಯ ಹಾಗೂ ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 17ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಚಕ್ರವರ್ತಿಗಳ ಹೆಸರನ್ನು ರಸ್ತೆಗಳಿಗೆ ನಾಮಕರಣ ಮಾಡುವಲ್ಲಿ ಸರ್ಕಾರಗಳು ನಿರಾಸಕ್ತಿ ತೋರುತ್ತಿದ್ದು, ರಾಜಕಾರಣಿಗಳ ಹೆಸರಿನಲ್ಲಿ ಪ್ರತಿಮೆ ಹಾಗೂ ಮಾರ್ಗ ನಾಮಕರಣದಲ್ಲಿ ತೊಡಗಿವೆ” ಎಂದು ಆಕ್ಷೇಪಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಉದ್ಘಾಟಿಸಲಿದ್ದು, ಬೇಕ್ರಿ ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮೈಸೂರು ವಿವಿಯ ಮಾಜಿ ಸೆನಟ್ ಸದಸ್ಯ ಈ.ಸಿ. ನಿಂಗರಾಜ್‌ಗೌಡ, ಸದ್ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಹರೀಶ್ ಕುಮಾರ್ ಎಂ.ಕೆ., ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಈ ಪಟಭವ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಖ್ಯಾತ ಲೇಖಕ ವಿಶ್ವಾಸ್. ಡಿ. ಗೌಡ ಅವರ ಐದನೇ ಕೃತಿ “ *ಚಿಂತನ ಚೈತ್ರ* ” ಲೋಕಾರ್ಪಣೆಗೊಳ್ಳಲಿದೆ.

“ಕತ್ತರಿ ಘಟ್ಟ ಮತ್ತು ಹರಿಸೇವಾ”, “ನೆನಪುಗಳ ಖಾತೆ”, “ಬಾಳೊಂದು ಚೈತ್ರಾಮಯ”, “ಚೈತ್ರದ ಚೈತನ್ಯ” ಮುಂತಾದ ಕೃತಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ಪಾದಾರ್ಪಣೆ ಮಾಡಿದ ಶ್ರೀ ವಿಶ್ವಾಸ್. ಡಿ.ಗೌಡ, ಈ ಬಾರಿ ತಮ್ಮ ಅಂಕಣ ಬರಹಗಳ ಸಂಕಲನದ ರೂಪದಲ್ಲಿ ” *ಚಿಂತನ ಚೈತ್ರ* ” ಎಂಬ ವಿಶಿಷ್ಟ ಕೃತಿಯನ್ನು ತಂದಿದ್ದಾರೆ.

ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಅಂಕಣ ಬರಹಗಳು ವಾಚಕರಿಂದ ಪ್ರಶಂಸಿತವಾಗಿದ್ದು, ಅದೇ ಬರಹಗಳು ಈ ಸಂಕಲನದಲ್ಲಿ ಅರ್ಥಪೂರ್ಣವಾದ ರೂಪ ಪಡೆದಿವೆ. ಈ ವಿಮರ್ಶಾತ್ಮಕ ಬರಹಗಳು ಹಾಗೂ ಹೊಸದಾಗಿ ಬರೆಯಲಾಗಿರುವ ಕೃತಿಗಳು ಮುದ್ರಣ ಹಂತದಲ್ಲಿವೆ ಎಂಬುದು ಗಮನಾರ್ಹವಾಗಿದೆ.

ಸಾಹಿತ್ಯ, ಇತಿಹಾಸ ಹಾಗೂ ಸಂಸ್ಕೃತಿಯ ಸಂಯೋಜನೆಯೊಂದಿಗೆ ನಡೆಯುವ ಈ ಕಾರ್ಯಕ್ರಮ, ಕನ್ನಡ ನಾಡು-ನುಡಿಯ ಗೌರವವನ್ನು ಹೆಚ್ಚಿಸಲಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *